ಎಲೈಸ್ ಗಿನೆನ್ಸಿಸ್ ಜಾಕ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಆಫ್ರಿಕನ್ ಆಯಿಲ್ ಪಾಮ್
ಕುಟುಂಬದ ಹೆಸರು : ಅರೆಕೇಸಿಯೇ
ವೈಜ್ಞಾನಿಕ ಹೆಸರು : ಎಲೈಸ್ ಗಿನೆನ್ಸಿಸ್ ಜಾಕ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಪಶ್ಚಿಮ ಮತ್ತು ದಕ್ಷಿಣ ಆಫ್ರಿಕಾ

ಉಪಯೋಗಗಳು

ಈ ಮರದಿಂದ ತೆಗೆದ ತಾಳೆ ಎಣ್ಣೆ ಪಶ್ಚಿಮ ಆಫ್ರಿಕಾ ಮತ್ತು ಮಲೇಷಿಯಾದಲ್ಲಿ ಜನಪ್ರಿಯವಾದ ಅಡುಗೆ ಎಣ್ಣೆಯಾಗಿದೆ. ಅಪಕ್ವವಾದ ಪುಷ್ಪ ಮಂಜರಿಯ ಬುಡದಿಂದ ಇಳಿಸಿ ತೆಗೆದ ಪಾಮ್ ವೈನ್ ಸ್ವಾದಿಷ್ಠವಾದ ವೈನ್ ಆಗಿದೆ.

ವಿವರಣೆ

ಮರದ ಕಾಂಡ ನೆಟ್ಟಗಿರುತ್ತದೆ, 30 ಮೀ ಎತ್ತರದವರೆಗೆ ಇರುತ್ತದೆ. ಕಾಂಡ ಚಿಕ್ಕದಾಗಿದ್ದಾಗ ಎಲೆಯ ಬುಡದ ಶೇಷಗಳಿಂದ ಮುಚ್ಚಲ್ಪಟ್ಟಿರುತ್ತದೆ. ಮರದತಲೆಯ ಭಾಗ ಮಜಬೂತಾಗಿರುತ್ತದೆ, 40-50 ಎಲೆಗಳು ಹಲವಾರು ಮಟ್ಟಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ. ಎಲೆಗಳು ಪಿನೇಟ್ ಆದ ಎಲೆಗಳು, 8/13 ಫಿಲೋಟಾಕ್ಸಿಸ್ ರೀತಿಯ ಜೋಡನೆ, ಪ್ರತಿ ಬದಿಯಲ್ಲಿ 100-150 ಚಿಗುರೆಲೆಗಳು. ಪುಷ್ಪಮಂಜರಿ ಗಂಡು ಅಥವಾ ಹೆಣ್ಣು, ಅಪರೂಪವಾಗಿ ಎರಡೂ ಇರುತ್ತವೆ. ಗಂಡು ಹೂವು 3 ಹೊಟ್ಟಿನಂತಹ ಪತ್ರದಳಗಳು ಮತ್ತು 3 ಚೂಪಾದ ದಳಗಳನ್ನು ಹೊಂದಿರುತ್ತದೆ. ಹೆಣ್ಣು ಹೂವು 2 ಕುಂಠಿತ ಬೆಳವಣಿಗೆಯ ಗಂಡು ಹೂವುಗಳೊಂದಿಗೆ ಇರುತ್ತದೆ. ಒಟ್ಟಾರೆಯಾಗಿ ಹಣ್ಣುಗಳು ಎಲಿಪ್ಸಾಯಿಂಡ್ ಅಥವಾ ಅಂಡಾಕಾರದಲ್ಲಿರುತ್ತವೆ, ಹತ್ತಿರದಲ್ಲಿ ಕಿತ್ತಲೆ ಬಣ್ಣ ಮತ್ತು ಡಯಟಲಿ(ದ್ವಿಮುಖವಾಗಿ) ಕಂದು ಬಣ್ಣದಿಂದ ಕಪ್ಪು ಬಣ್ಣ ಕಾಣುತ್ತದೆ. ಎಂಡೋಕಾರ್ಪ್ ಕಪ್ಪು ಬಣ್ಣದಲ್ಲಿರುತ್ತದೆ.