ಎಲಿಯೊಕಾರ್ಪಸ್ ಅಂಗಸ್ಟಿಫೋಲಿಯಸ್ ಬ್ಲೂಮ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಬ್ಲೂ ಮಾರ್ಬಲ್ ಟ್ರೀ
ಕುಟುಂಬದ ಹೆಸರು : ಎಲಿಯೊಕಾರ್ಪೇಸಿ
ವೈಜ್ಞಾನಿಕ ಹೆಸರು : ಎಲಿಯೊಕಾರ್ಪಸ್ ಅಂಗಸ್ಟಿಫೋಲಿಯಸ್ ಬ್ಲೂಮ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

.ಬೀಜಗಳು ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳಿಗೆ ಒಂದು ಒಳ್ಳೆಯ ಪರಿಹಾರ ಎನ್ನಲಾಗುತ್ತದೆ.ತಲೆ ಮತ್ತು ಅಪಸ್ಮಾರದ ಕಾಯಿಲೆಗಳ ಚಿಕಿತ್ಸೆಯಲ್ಲಿ ಹಣ್ಣನ್ನು ಬಳಸಲಾಗುತ್ತದೆ. ಎಲೆಯ ರಸವನ್ನು ಹೊಟ್ಟೆ-ನೋವು ಅಥವಾ ಎದೆ ಹಾಗೂ ಭುಜಗಳಲ್ಲಿನ ನೋವನ್ನು ಗುಣಪಡಿಸಲು ಬಳಸಲಾಗುತ್ತದೆ.

ವಿವರಣೆ

.30 ಮೀ ಎತ್ತರದವರೆಗೆ ಇರುವ ,ನಿತ್ಯಹರಿದ್ವರ್ಣ ಮರಗಳು. ನೀಳರೋಮಗಳುಳ್ಳ ಕಿರುಕೊಂಬೆಗಳು ಹಳದಿ ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್, ಒಬ್ಲಾಂಗ್ – ಒಬೊವೇಟ್, ಒಬ್ಲಾಂಗ್ -ಲ್ಯಾನ್ಸಿಲೇಟ್, ಆಗಿದ್ದು ಪೊರೆಯಂತಿರುತ್ತವೆ, ಎಳೆಯದಾದಾಗ ವಿಲಸ್ ಆಗಿದ್ದು, ಬಲಿತಮೇಲೆ ರೋಮರಹಿತವಾಗುತ್ತವೆ. ಒಟ್ಟಾರೆಯಾಗಿ ಬುಡ ಕೀಲಿ ಆಕಾರದಲ್ಲಿರುತ್ತದೆ, ತುದಿ ಚೂಪು ಅಥವಾ ಮೊಂಡಾಗಿರುತ್ತದೆ, ಅಂಚು ಗರಗಸದಂತಿರುತ್ತದೆ. ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನ ರೇಸಿಮ್. ಹೂವುಗಳು ದ್ವಿಲಿಂಗಿಗಳಾಗಿದ್ದು, ಕೆನೆ-ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು ಒಂದು, ಗೋಳಾಕಾರದ, ರೋಮರಹಿತವಾದ, ಪ್ರಕಾಶಮಾನವಾದ ನೀಲಿ ಬಣ್ಣದ, ಡ್ರೂಪ್, 5 ಕಿರುಕುಹರಗಳಿರುತ್ತವೆ, ಪ್ರತಿ ಕುಹರದಲ್ಲು ಒಂದು ಬೀಜವಿದ್ದು, ರುಗುಲೋಸ್ ಅಗಿರುತ್ತದೆ.