ಎಂಟರೊಲೋಬಿಯಂ ಸೈಕ್ಲೋಕಾರ್ಪಮ್ (ಜಾಕ್.) ಗ್ರಿಸೆಬ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಮಂಕಿ ಇಯರ್ ಟ್ರೀ, ಎಲಿಫೆಂಟ್ ಇಯರ್ ಟ್ರೀ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಎಂಟರೊಲೋಬಿಯಂ ಸೈಕ್ಲೋಕಾರ್ಪಮ್ (ಜಾಕ್.) ಗ್ರಿಸೆಬ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ:
ಮೂಲ: ಉಷ್ಣವಲಯದ ಅಮೇರಿಕಾ

ಉಪಯೋಗಗಳು

.ತೊಗಟೆಯ ಸಾರಗವನ್ನು ಶೀತ ಮತ್ತು ಬ್ರಾಂಕೈಟಿಸ್ ಗಳ ಚಿಕಿತ್ಸೆಯಲ್ಲಿ ಔಷಧಿಯನ್ನಾಗಿ ಬಳಸಲಾಗುತ್ತದೆ.ಈ ಮರಕ್ಕೆ ಒಣ-ಮರದ ಗೆದ್ದಲುಗಳು ಮತ್ತು ಲೈಕ್ಟಸ್(ಜೀರುಂಡೆ) ಗಳ ದಾಳಿಯನ್ನು ನಿರೋಧಿಸುವ ಶಕ್ತಿ ಇದೆ.ಹಾಗಾಗಿ ಇದನ್ನು ಮನೆಯ ನಿರ್ಮಾಣದಲ್ಲಿ ಮತ್ತು ಪ್ಯಾನೆಲಿಂಗ್ ಸೇರಿದಂತೆ, ಮನೆಯೊಳಗಿನ ಮರಗೆಲಸಗಳಿನ ಬಳಸಬಹುದು.ಗುಣಮಟ್ಟದ ಕಾಗದವನ್ನು ತಯಾರಿಸುವುದಕ್ಕೂ ಈ ಮರ ಉತ್ಕೃಷ್ಠವಾಗಿದೆ.

ವಿವರಣೆ

30 ಮೀ ಎತ್ತರದವರೆಗೆ ಇರುವ, ಮಧ್ಯಮದಿಂದ ದೊಡ್ಡ ಗಾತ್ರವಿರುವ ಡೆಸಿಡುಅಸ್ ಮರ. ಮರದ ಮೇಲ್ಭಾಗ ತೆಳುವಾಗಿ ಹರಡಿರುತ್ತದೆ. ಎಳೆಯ ಕಿರುಕೊಂಬೆಗಳು, ಎಲೆಗಳು ಮತ್ತು ಹೂಗೊಂಚಲುಗಳು ಬಿಳಿಯ ಮೃದುತುಪ್ಪಳದಿಂದ ಕೂಡಿರುತ್ತವೆ. ಎಲೆಗಳು ಬೈಪಿನ್ನೇಟ್. ಆಲ್ಟರ್ನೇಟ್ ಆಗಿರುತ್ತವೆ 12 -30 ಜೋಡಿ ; ಚಿಗುರೆಲೆಗಳು , ಫಾಲ್ಕೇಟ್-ಲ್ಯಾನ್ಸಿಲೇಟ್, ಆಗಿದ್ದು ಮೃದುತುಪ್ಪಳ ಹರಡಿದಂತಿರುತ್ತದೆ, ಮೊಟಕಾದ ಬುಡ, ಮ್ಯೂಕ್ರೊನೇಟ್ ಆದ ತುದಿ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ತಲೆ ಹೂಗೊಂಚಲು. ದ್ವಿಲಿಂಗಿ ಹೂವುಗಳು, ಹಸಿರು ಅಥವಾ ಬಿಳಿ ಬಣ್ಣದಲ್ಲಿದ್ದು, ಹಲವಾರು ಕೇಸರಗಳಿರುತ್ತವೆ.ಹಣ್ಣು, ಕಪ್ಪು-ಕಂದು ಬಣ್ಣದ, ಆರಿಕ್ಯುಲೇಟ್-ರೆನಿಫಾರ್ಮ್,ಬಾಗಿದಂತಿರುವ, ತಿರುಳು ತುಂಬಿರುವ, ದುಂಡಾಗಿರುವ ಒಂದು ಬಿರಿಯದ ಪಾಡ್. ಗಾಢ ಕಂದುಬಣ್ಣದ, ಹೊಳೆಯುವ 10-20 ಬೀಜಗಳು, 2 ಸಾಲುಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ,