ಕನ್ನಡದ ಹೆಸರು : | ನೀಲಗಿರಿ |
ಸಾಮಾನ್ಯ ಹೆಸರು : | ಸದರನ್ ಬ್ಲ್ಯು ಗಮ್ |
ಕುಟುಂಬದ ಹೆಸರು : | ಮಿರ್ಟೇಸಿ |
ವೈಜ್ಞಾನಿಕ ಹೆಸರು : | .ಯೂಕಲಿಪ್ಟಸ್ ಗ್ಲೋಬ್ಯುಲಸ್ ಲ್ಯಾಬಿಲ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಡಿಸೆಂಬರ್ - ಮೇ |
ಹಣ್ಣಾಗುವ ಅವಧಿ: | |
ಮೂಲ: | ಆಸ್ಟ್ರೇಲಿಯಾ |
ತೆರಪ್ಯೂಟಿಕ್ , ಸುಗಂಧ ದ್ರವ್ಯ, ಸ್ವಾದ, ಆಂಟಿಮೈಕ್ರೊಬಿಯಲ್ ಮತ್ತು ಜೈವಿಕ ಕೀಟನಾಶಕ ಗುಣಲಕ್ಷಣಗಳನ್ನು ಹೊಂದಿರುವ ನೀಲಗಿರಿ ಎಣ್ಣೆಯನ್ನು ಹೊರತೆಗೆಯಲು ಎಲೆಗಳನ್ನು ಉಗಿ ಬಟ್ಟಿ ಮಾಡಿ ಇಳಿಸಲಾಗುತ್ತದೆ. ಎಲೆಗಳನ್ನು ಹರ್ಬಲ್ ಚಹಾದಲ್ಲಿ ಬಳಸಲಾಗುತ್ತದೆ
45 ಮೀ ಎತ್ತರದ ದೊಡ್ಡ ಮರಗಳು.ಸಾಮಾನ್ಯವಾಗಿ ತೊಗಟೆ ನಯವಾಗಿರುತ್ತದೆ, ಬಿಳಿಯಿಂದ ಕೆನೆ ಬಣ್ಣದಲ್ಲಿರುತ್ತದೆ,ಆದರೆ ಕೆಳಗಿನ ಭಾಗದಲ್ಲಿ ಒರಟು ಮತ್ತು ಕಂದು ಬಣ್ಣದ ತೊಗಟೆ ಇರುತ್ತದೆ. ಚಿಗುರೆಲೆಗಳು ಆಪೊಸಿಟ್, ಸೆಸ್ಸೈಲ್, ಓವೇಟ್ ಆಗಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್, ಲ್ಯಾನ್ಸ್ಲೇಟ್, ಫಾಲ್ಕೇಟ್, ಕೊರಿಯೇಸಿಯಸ್ ಆಗಿದ್ದು, ಎರಡೂ ಮೇಲ್ಮೈಗಳಲ್ಲಿ ಗ್ರಂಥಿಗಳಿರುತ್ತವೆ, ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನ ಹೂಕೊಡೆ. ದ್ವಿಲಿಂಗಿ ಹೂವುಗಳು ಸೆಸೈಲ್ ಆಗಿರುತ್ತವೆ, ಆಪರ್ಕ್ಯುಲಮ್ ಚಪ್ಪಟೆಯಾಗಿರುತ್ತದೆ, ಪುಷ್ಪ ಪಾತ್ರೆ (ಹೈಪಾಂಥಿಯಮ್) ಆಪರ್ಕ್ಯುಲಮ್ (ಪಿಧಾನ) ನಷ್ಟೇ ಅಗಲವಾಗಿರುತ್ತದೆ.ಹಣ್ಣು 1-2.1 ಸೆಂ.ಮೀ ಉದ್ದ, 3-5 ಕವಾಟಗಳಿರುವ,ತಲೆಕೆಳಗಾದ ಶಂಕುವಿನ ಆಕಾರದಿಂದ ಅರ್ಧಗೋಳದ ಆಕಾರದಲ್ಲಿದ್ದು, ಗ್ಲಾಕಸ್ ಆಗಿರುತ್ತದೆ. ಬೀಜಗಳು ಚಪ್ಪಟೆಯಾಗಿರುತ್ತವೆ ಮತ್ತು ಅಂಡಾಕಾರದಲ್ಲಿರುತ್ತವೆ.