ಕನ್ನಡದ ಹೆಸರು : | ಬಿಳಿಬಸರಿ ಮರ |
ಸಾಮಾನ್ಯ ಹೆಸರು : | ಇಂಡಿಯನ್ ಬ್ಯಾಟ್ ಟ್ರೀ |
ಕುಟುಂಬದ ಹೆಸರು : | ಮೊರೇಸಿ |
ವೈಜ್ಞಾನಿಕ ಹೆಸರು : | ಫಿಕಸ್ ಆಂಪ್ಲಿಸ್ಸಿಮಾ ಸ್ಮಿತ್ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಡಿಸೆಂಬರ್ - ಜನವರಿ |
ಹಣ್ಣಾಗುವ ಅವಧಿ: | ಡಿಸೆಂಬರ್ - ಫೆಬ್ರವರಿ |
ಮೂಲ: | ಪಶ್ಚಿಮ ಘಟ್ಟಗಳು, ಶ್ರೀಲಂಕಾ |
ಸಾಂಪ್ರದಾಯಿಕವಾಗಿ ಇದನ್ನು ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಿಗಳಲ್ಲಿ ಮಧುಮೇಹದ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಮರದ ತೊಗಟೆ ನೈಸರ್ಗಿಕವಾದ ಆಂಟಿ ಡಯಾಬಿಟಿಕ್ ಮತ್ತು ಆಂಟಿ ಆಕ್ಸಿಡೆಂಟ್ ಔಷಧವಾಗಿದ್ದು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಎಲೆಗಳಲ್ಲಿರುವ ಫೀನಾಲ್ ನಿಂದ ಉರಿಯೂತ ನಿವಾರಿಸುವ ಮತ್ತು ಗಾಯವನ್ನು ಗುಣಪಡಿಸುವ ಗುಣಗಳನ್ನು ಎಲೆಗಳು ಪಡೆಯುತ್ತವೆ. ಸ್ಥಳೀಯ ಔಷಧದಲ್ಲಿ, ಎಲೆಗಳ ರಸವನ್ನು ದೀರ್ಘಕಾಲದ ಗಾಯಗಳ ಮೇಲೆ ಹಚ್ಚಲಾಗುತ್ತದೆ ಮತ್ತು ಲ್ಯಾಟೆಕ್ಸ್ ಅನ್ನು ಹೊಸ ಗಾಯಗಳ ಮೇಲೆ ಬಳಸಲಾಗುತ್ತದೆ. ಅಂಜೂರದ ಹಣ್ಣುಗಳನ್ನು ಅಗಿದು ಮತ್ತು ಅವುಗಳ ರಸವನ್ನು ಹೀರುವ ಮೂಲಕ ಬಾಯಿಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
18 ಮೀ ಎತ್ತರದವರೆಗಿನ ದೊಡ್ಡ ಡೆಸಿಡುಅಸ್ ಮರ. , ಬಿಳಿಯಾದ ಮೃದು ತುಪ್ಪಳವಿರುವ ಎಳೆಯ ಚಿಗುರುಗಳಲ್ಲಿ ಮಧ್ಯದಂತಹ ಅಂಶವಿರುತ್ತದೆ. ಎಲೆಗಳು ಸರಳ, ಒವೇಟ್ ಅಥವಾ ಎಲಿಪ್ಟಿಕ್ -ಲ್ಯಾನ್ಸಿಲೇಟ್‌ನಿಂದ ಒವೇಟ್ – ಒಬ್ಲಾಂಗ್ , ರೋಮರಹಿತವಾಗಿದ್ದು, ಚರ್ಮದಂತಿರುತ್ತವೆ, ಬುಡವು ದುಂಡಿನಿಂದ ಕೀಲಿ ಆಕಾರದಲ್ಲಿರುತ್ತದೆ, ತುದಿ ಚೂಪಾಗಿರುತ್ತದೆ ಅಥವಾ ಹರಿತವಲ್ಲದ ತುದಿಯಾಗಿರುತ್ತದೆ, ಕಾವಿನೆಲೆಗಳು ಒವೇಟ್ -ಲ್ಯಾನ್ಸಿಲೇಟ್ ಆಗಿರುತ್ತವೆ. ಪುಷ್ಪ ಮಂಜರಿ ಒಂದು ಸೈಕೋನಿಯಮ್., ಸೆಸೈಲ್ ಮೊನೊಸಿಯಸ್ ಆದ ಹೈಪಾಂಥೋಡಿಯಾ , ಜೋಡಿಗಳಾಗಿ ಕವಲು ಮೂಲೆಗಳಲ್ಲಿ ಮತ್ತು ಹಳೆಯ ಎಲೆಯ ಗುರುತುಗಳ ಸುತ್ತಲೂ ಇರುತ್ತದೆ, ಕುಗ್ಗಿರುವ ಗೋಳಾಕಾರ ಅಥವಾ ಅಂಡಾಕಾರದ ಕೆಳಗಿನ ತೊಟ್ಟುಗಳು , ಗ್ಲ್ಯಾಬ್ರಸ್ ನಿಂದ ಪ್ಯೂಬರುಲಸ್ ಆಗಿರುತ್ತವೆ. ಗಂಡು ಹೂವುಗಳು: ಚದುರಿದಂತಿದ್ದು,ಅಲ್ಪ ಸಂಖ್ಯೆಯಲ್ಲಿರುತ್ತವೆ, ಕೇಸರ ಒಂದೇ ಇರುತ್ತದೆ. ಬಿಳಿ ಅಂಡಾಶಯವಿರುವ ಹೆಣ್ಣು ಹೂಗಳು; ಸೆಸ್ಸೈಲ್ ಆಗಿರುತ್ತವೆ. ಒತ್ತಿದಂತಿರುವ ಅಂಜೂರಗಳು ಗೋಳಾಕಾರದಿಂದ ಪೈರಿಫಾರ್ಮ್ ನಲ್ಲಿರುತ್ತವೆ, ಈ ನಯವಾದ ಅಕೆನ್ಗಳು, ಗುಲಾಬಿಯಿಂದ ನೇರಳೆ ಬಣ್ಣದಲ್ಲಿರುತ್ತವೆ.