ಫಿಕಸ್ ಬೆಂಗಾಲೆನ್ಸಿಸ್ ಎಲ್.

ಕನ್ನಡದ ಹೆಸರು : ಆಲದ ಮರ
ಸಾಮಾನ್ಯ ಹೆಸರು : ಆಲದ ಮರ, ಸ್ಟ್ರಾಂಗ್ಲರ್ ಅಂಜೂರ
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : ಫಿಕಸ್ ಬೆಂಗಾಲೆನ್ಸಿಸ್ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಎವರ್ ಗ್ರೀನ್
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಮಾರ್ಚ್ - ಮೇ
ಮೂಲ: ಭಾರತದ ಉಪಖಂಡ

ಉಪಯೋಗಗಳು

ಭೇದಿ ಮತ್ತು ಅತಿಸಾರವನ್ನು ನಿವಾರಿಸಲು ಎಲೆಗಳನ್ನು ಬಳಸಲಾಗುತ್ತದೆ. ಅವುಗಳನ್ನು ಹುರಿದ ಅನ್ನದ ಜೊತೆಯ ಒಂದು ಕಷಾಯದಲ್ಲಿ ಡಯಾಫೊರೆಟಿಕ್(ಸ್ವೇದಕಾರಿ) ಆಗಿ ಬಳಸಲಾಗುತ್ತದೆ. ಎಳೆಯ ಎಲೆಗಳನ್ನು ಬಿಸಿಮಾಡಿ ಪೌಲ್ಟೀಸ್ ಗೆ ಬಳಸಲಾಗುತ್ತದೆ. ತೊಗಟೆ ಟಾನಿಕ್ ಮತ್ತು ಮೂತ್ರವರ್ಧಕವಾಗಿದೆ. ಬೇರಿನ ನಾರುಗಳ ಕಷಾಯ ಗೊನೊರಿಯಾದ ಚಿಕಿತ್ಸೆಗೆ ಉಪಯುಕ್ತವಾಗಿದೆ, ಹಾಗೆಯೇ ಏರಿಯಲ್ ಬೇರುಗಳ( ಬಿಳಲುಗಳು) ಎಳಸಾದ ತುದಿಗಳನ್ನು ಹತೋಟಿಗೆ ಬರದ ವಾಂತಿಯ ಚಿಕಿತ್ಸೆಗೆ ಬಳಸಲಾಗುತ್ತದೆ..

ವಿವರಣೆ

.25 ಮೀ ಎತ್ತರದ, ದೊಡ್ಡದಾದ, ನಿತ್ಯಹರಿದ್ವರ್ಣದಿಂದ ಡೆಸಿಡುಅಸ್ ಆದ ಮರ, ಕಂಬದಂತಹ ಆಸರೆ ಬೇರುಗಳು ಮತ್ತು ಸಹಾಯಕ ಕಾಂಡಗಳಿರುತ್ತವೆ. ಬೃಹತ್ತಾದ ಕಾಂಡ, ಕೊಳಲಿನಂತಿದ್ದು, ತೊಗಟೆ ಬೂದು ಬಣ್ಣದಲ್ಲಿರುತ್ತದೆ,ಎಳೆಯ ಕಾಂಡಗಳು ನುಣುಪಾಗಿದ್ದು, ಬಿಳಿಯ ಮೃದುವಾದ ರೋಮಗಳಿಂದ ಕೂಡಿರುತ್ತವೆ. ದೃಢವಾದ ಎಲೆಗಳು, ಕೂದಲುಳ್ಳ ತೊಟ್ಟುಗಳನ್ನು ಹೊಂದಿರುತ್ತವೆ; ಸರಳ, ಒವೇಟ್ ಅಥವಾ ಒಬೊವೇಟ್ ನಿಂದ ಅಂಡಾಕಾರದವರೆಗೆ, ಮೇಲ್ಭಾಗದಲ್ಲಿ ರೋಮರಹಿತವಾಗಿರುತ್ತವೆ, ಕೆಳಭಾಗದಲ್ಲಿ ನವಿರಾಗಿ ಪ್ಯುಬೆಸೆಂಟ್ ಆಗಿರುತ್ತದೆ, ಚರ್ಮದಂತಿರುವ ಎಲೆಗಳ, ಬುಡ ಉಪಕಾರ್ಡೇಟ್ ಅಥವಾ ದುಂಡಾಗಿರುತ್ತದೆ, ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ, ಪಕ್ಕದಲ್ಲಿ ಸಿಸ್ಟೊಲಿತ್‌ಗಳು ಹೇರಳವಾಗಿರುತ್ತವೆ, ಕೆಳಗೆ ಕೆಲವು ಇರಬಹುದು ಅಥವಾ ಇಲ್ಲದಿರಬಹುದು. ಪುಷ್ಪ ಮಂಜರಿ ಒಂದು ಸೈಕೋನಿಯಮ್. ಎಳೆಯ ಕುಗ್ಗಿದ-ಗೋಳಾಕಾರದ, ಹಸಿರು ಬಣ್ಣದ, ಕೂದಲುಳ್ಳ, ನವಿರಾದ ಕೂದಲುಳ್ಳ ತಳದ ತೊಟ್ಟುಗಳ ಮೇಲೆ ಕವಲುಮೂಲೆಯ ಜೋಡಿಗಳಾಗಿ, ಸೆಸ್ಸೈಲ್ ಆದ ಹೈಪಾಂಥೋಡಿಯಾ ಇರುತ್ತದೆ, ಗಂಡು ಹೂವುಗಳಲ್ಲಿ: ಹಲವಾರು ರಂದ್ರಗಳಿರುತ್ತವೆ (ಆಸ್ಟಿಯೋಲಾರ್); ಒಂದು ಕೇಸರವಿರುತ್ತದೆ, ಸ್ವಲ್ಪ ಮ್ಯೂಕ್ರೊನೇಟ್ ಪರಾಗವನ್ನು ಹೊಂದಿರುತ್ತದೆ. ಹೆಣ್ಣು ಹೂವುಗಳು:ಸೆಸ್ಸೈಲ್ ಆಗಿದ್ದು ಚಿಕ್ಕ ಗಾಲ್ ಹೂವುಗಳೊಂದಿಗೆ ಸೇರಿಹೋಗಿರುತ್ತವೆ, ಕೂಳೆಗಳನ್ನು ಒಳಗೊಂಡಂತಹ ಹಲವಾರು ಗಾಲ್ ಹೂವುಗಳು ಇರುತ್ತವೆ. ಗ್ಲೊಬೋಸ್ ನಿಂದ - ಕುಗ್ಗಿದ ಗ್ಲೋಬೋಸ್ ಆಕಾರದ, ಕೂದಲಿರುವಂತಹ ಅಂಜೂರ, ಗುಲಾಬಿ-ಕೆಂಪು, ಬಣ್ಣದಲ್ಲಿರುತ್ತದೆ.