ಕನ್ನಡದ ಹೆಸರು : | ಜಾವಾ ಅತ್ತಿ |
ಸಾಮಾನ್ಯ ಹೆಸರು : | ವೀಪಿಂಗ್ ಫಿಗ್ |
ಕುಟುಂಬದ ಹೆಸರು : | ಮೊರೇಸಿ |
ವೈಜ್ಞಾನಿಕ ಹೆಸರು : | ಫಿಕಸ್ ಬೆಂಜಮಿನಾ ಎಲ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ಏಷ್ಯಾ, ಆಸ್ಟ್ರೇಲಿಯಾ |
.ಸಂಧಿವಾತದ ತಲೆನೋವಿನ ಚಿಕಿತ್ಸೆಯಲ್ಲಿ ಎಲೆ ಮತ್ತು ತೊಗಟೆಯನ್ನು ಕುಟ್ಟಿ ಪೌಲ್ಟೀಸ್ ಆಗಿ ಹಾಕಲಾಗುತ್ತದೆ. ಮರದ ಗುಣಮಟ್ಟ ಕಡಿಮೆ ಇರುತ್ತದೆ, ಆದರೆ ಇದನ್ನು ತಾತ್ಕಾಲಿಕ ಕಟ್ಟಡಗಳು, ಮೋಲ್ಡಿಂಗ್, ಕಟ್ಟಡದ ಒಳಗಿನ ಮರ ಕೆಲಸಗಳು, ಕ್ಲಾಡಿಂಗ್, ಡ್ರಾಯರ್‌ಗಳು, ಸಣ್ಣಪುಟ್ಟ ಗೃಹೋಪಯೋಗಿ ವಸ್ತುಗಳು, ಹಣ್ಣಿನ ಪೆಟ್ಟಿಗೆಗಳು ಇತ್ಯಾದಿಗಳಿಗೆ ಬಳಸಲಾಗುತ್ತದೆ.
. 30 ಮೀ ಎತ್ತರದ,ನಿತ್ಯಹರಿದ್ವರ್ಣ ಮರಗಳು. ತೊಗಟೆ ಬೂದು ಬಣ್ಣದಿಂದ ಬೂದು-ಬಿಳಿ, ನಯವಾಗಿರುತ್ತದೆ. ಹೊಸ ಕಾಂಡಗಳಾಗಿ ಬೆಳೆಯಬಹುದಾದ ಬಿಳಲು ಬೇರುಗಳನ್ನು ಹುಟ್ಟಿಸುವ ಮುಖ್ಯ ಕೊಂಬೆಗಳು; ಲೋಲಕದಂತೆ ಜೋತಾಡುವ, ಬೂದು-ಬಿಳಿ ಬಣ್ಣದ ಕಿರುಕೊಂಬೆಗಳು, ರೋಮರಹಿತವಾಗಿರುತ್ತವೆ. ಎಲೆಗಳು ಸರಳವಾಗಿರುತ್ತವೆ, ಬ್ಲೇಡ್ ಒವೇಟ್ ನಿಂದ ಒಟ್ಟಾರೆಯಾಗಿ ಎಲಿಪ್ಟಿಕ್ , ರೋಮರಹಿತವಾಗಿರುತ್ತವೆ, ಚರ್ಮದಂತಿರುವ ಎಲೆಗಳ, ಬುಡ ದುಂಡು – ಕೀಲಿ ಆಕಾರದಲ್ಲಿರುತ್ತದೆ, ಅಂಚು ಸಂಪೂರ್ಣವಾಗಿದ್ದು, ತುದಿ ಸ್ವಲ್ಪವೇ ಚೂಪಾಗಿರುತ್ತದೆ. ಪುಷ್ಪ ಮಂಜರಿ ಒಂದು ಸೈಕೋನಿಯಮ್. ಅಂಜೂರಗಳು ಎಲೆಗಳ ಕಿರುಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿದ್ದು, ಜೋಡಿ ಅಥವಾ ಒಂಟಿಯಾಗಿರುತ್ತವೆ. ಒಂದೇ ಅಂಜೂರದಲ್ಲಿ ಗಂಡು, ಹೆಣ್ಣು ಮತ್ತು ಗಾಲ್ ಹೂವುಗಳಿರುತ್ತವೆ.ಸ್ವಲ್ಪ ಪೆಡಿಸಲೇಟ್ ಆದ ಕೆಲವೇ ಗಂಡು ಹೂವುಗಳಿರುತ್ತವೆ; 1 ಕೇಸರವಿರುತ್ತದೆ .ಅನೇಕ ಗಾಲ್ ಹೂವುಗಳು ಇರುತ್ತವೆ: ಹೆಣ್ಣು ಹೂಗಳು: ಸೆಸೈಲ್ ಆಗಿರುತ್ತವೆ. ಹಣ್ಣು ಒಂದು ಅಕೀನ್, ಅಂಡಾಕಾರದ-ರೆನಿಫಾರ್ಮ್, ನಿತ್ಯವಾಗಿರುವ ರೀತಿಗಿಂತ ಚಿಕ್ಕದಾಗಿದೆ. ಮಾಗಿದ ಅಂಜೂರದ ಹಣ್ಣುಗಳು ನೇರಳೆ, ಕೆಂಪು, ಅಥವಾ ಹಳದಿ [ಅಥವಾ ಬಿಳಿ ಚುಕ್ಕೆಗಳೊಂದಿಗೆ ಕೆಂಪು] ಬಣ್ಣದಲ್ಲಿರುತ್ತವೆ, ಗೋಳಾಕಾರದಿಂದ ಕುಗ್ಗಿದ ಗೋಳಾಕಾರ ಅಥವಾ ಕೆಲವೊಮ್ಮೆ ಪೇರಳೆ-ಆಕಾರದಲ್ಲಿರುತ್ತದೆ, ರೋಮರಹಿತ ಅಥವಾ ಮೃದುವಾಗಿದ್ದು, ಬುಡ ತೊಟ್ಟಿನ ಕಡೆಗೆ ಸಣ್ಣದಾಗುತ್ತಾ ಹೋಗಿ, ಅಂಟಿಕೊಂಡಿರುತ್ತದೆ.