ಕನ್ನಡದ ಹೆಸರು : | ಗೋಣಿ ಮರ |
ಸಾಮಾನ್ಯ ಹೆಸರು : | ಮೈಸೂರು ಅಂಜೂರ |
ಕುಟುಂಬದ ಹೆಸರು : | ಮೊರೇಸಿ |
ವೈಜ್ಞಾನಿಕ ಹೆಸರು : | ಫಿಕಸ್ ಡ್ರುಪೇಸಿಯಾ ಥಂಬ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಎವರ್ ಗ್ರೀನ್ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಜನವರಿ - ಏಪ್ರಿಲ್ |
ಹಣ್ಣಾಗುವ ಅವಧಿ: | ಜನವರಿ - ಏಪ್ರಿಲ್ |
ಮೂಲ: | ಸೌತ್ ಈಸ್ಟ್ ಏಷ್ಯಾ, ಆಸ್ಟ್ರೇಲಿಯಾ |
ಈ ಬೇರುಗಳನ್ನು ಪುಡಿಮಾಡಿ ಗಾಯಗಳಿಗೆ ಹಚ್ಚಿದಾಗ ಉತ್ತಮವಾಗಿ ಗುಣಪಡಿಸುತ್ತದೆ..
10-15 ಮೀ ಎತ್ತರವಿರುವ ಡೆಸಿಡುಅಸ್ ಮರಗಳು. ಬೂದು ಮಿಶ್ರಿತ ಬಿಳಿ ಬಣ್ಣದ ತೊಗಟೆ, ದಟ್ಟವಾದ ಹಳದಿ ಮಿಶ್ರಿತ ಕಂದು ಬಣ್ಣದ ತುಪ್ಪಳವಿರುತ್ತದೆ. ಎಲೆಗಳು ಸರಳ, ಪರಿಮಿತವಾಗಿ ಎಲಿಪ್ಟಿಕ್ ನಿಂದ ಒಬೊವೇಟ್ –ಎಲಿಪ್ಟಿಕ್, ಕೊರಿಯೇಸಿಯಸ್, ರೋಮರಹಿತ ಅಥವಾ ಅಬಾಕ್ಸಿಯಲಿ ಹಳದಿ ಮಿಶ್ರಿತ ಕಂದು ಬಣ್ಣದ ತುಪ್ಪಳವನ್ನು ಹೊಂದಿರುತ್ತವೆ ಆದರೆ ಗ್ಲ್ಯಾಬ್ರೆಸೆಂಟ್ ಆಗಿರುತ್ತವೆ, ಅಡಾಕ್ಸಿಯಲಿ ಹಸಿರು ಮತ್ತು ರೋಮರಹಿತ ಅಥವಾ ವಿರಳವಾಗಿ ಸ್ವಲ್ಪ ಪ್ಯೂಬೆಸೆಂಟ್ ಅಥವಾ ದಟ್ಟವಾದ ಹಳದಿ ಮಿಶ್ರಿತ ಕಂದು ಬಣ್ಣದ ಉದ್ದವಾದ ಮೃದು ಉಣ್ಣೆಯನ್ನು ಹೊಂದಿರುತ್ತವೆ ಆದರೆ ಗ್ಲಾಬ್ರೆಸೆಂಟ್ ಆಗಿರುತ್ತವೆ, ಬುಡ ದುಂಡು ಅಥವಾ ಕಾರ್ಡೇಟ್ ನಿಂದ ಆರಿಕ್ಯುಲೇಟ್ ಆಗಿರುತ್ತದೆ. ತುದಿ ಚೂಪಾಗಿದ್ದು, ಅಂಚು ಸಂಪೂರ್ಣ ಅಥವಾ ಸ್ವಲ್ಪ ಅಲೆಯಂತಿರುತ್ತದೆ. ಪುಷ್ಪ ಮಂಜರಿ ಒಂದು ಸೈಕೋನಿಯಮ್. ಕೆಂಪು ಕಿತ್ತಳೆಯಿಂದ ಕೆಂಪು ಮತ್ತು ಅಲ್ಲಲ್ಲಿ ಬಿಳಿ ಚುಕ್ಕೆಗಳಿರುವ, ಆಯತಾಕಾರ, ದಿಂಬಿನ ಆಕಾರ ಅಥವಾ ಶಂಕುವಿನಾಕಾರ-ಅಂಡಾಕಾರದ, ರೋಮರಹಿತ ಅಥವಾ ದಟ್ಟವಾದ ಕಂದು ಹಳದಿ ಉದ್ದನೆಯ ಕೂದಲಿನೊಂದಿಗೆ ಮುಚ್ಚಲಾದ, ಅಂಜೂರಗಳು ಜೋಡಿಯಾಗಿ ಎಲೆಗಳ ಕಿರುಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿರುತ್ತವೆ. ಒಂದೇ ಅಂಜೂರದಲ್ಲಿ ಗಂಡು, ಹೆಣ್ಣು ಮತ್ತು ಗಾಲ್ ಹೂವುಗಳಿರುತ್ತವೆ. ಗಂಡು ಹೂವುಗಳು: ಉದ್ದ-ತೊಟ್ಟು, 1 ಕೇಸರ 1, ಸ್ವಲ್ಪ ಎಲಿಪ್ಸಾಯಿಂಡ್ ಆದ ಪರಾಗವನ್ನು ಹೊಂದಿರುತ್ತವೆ. ಗಾಲ್ ಹೂವುಗಳು: ಪೆಡಿಸೆಲ್ಲೇಟ್; ದಳಗಳು ಕೊನೇಟ್ ಆಗಿದ್ದು, ತುದಿಯಲ್ಲಿ 3- ಅಥವಾ 4-ಹಾಲೆಗಳಿರುತ್ತವೆ; ಹೆಣ್ಣು ಹೂವುಗಳು: ಒಟ್ಟಾರೆಯಾಗಿ ಲ್ಯಾನ್ಸಿಲೇಟ್ ಆಗಿದ್ದು, ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು ಟ್ಯೂಬರ್ಕ್ಯುಲೇಟ್ ಆದ ಒಂದು ಅಕಿನ್.