ಫಿಕಸ್ ಎಲಾಸ್ಟಿಕಾ ರಾಕ್ಸ್ಬ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ರಬ್ಬರ್ ಫಿಗ್
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : ಫಿಕಸ್ ಎಲಾಸ್ಟಿಕಾ ರಾಕ್ಸ್ಬ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ದಕ್ಷಿಣ ಮತ್ತು ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

.ಇದನ್ನು ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತ್ತದೆ.

ವಿವರಣೆ

20-30 ಮೀ ಎತ್ತರದ ದೊಡ್ಡ, ನಿತ್ಯಹರಿದ್ವರ್ಣ ಮರಗಳು. ತೊಗಟೆ ತೆಳು ಬೂದು ಬಣ್ಣದಲ್ಲಿದ್ದು, ನಯವಾಗಿರುತ್ತದೆ. ಕಿರುಕೊಂಬೆಗಳು ಬಲವಾಗಿರುತ್ತವೆ. ಎಲೆಗಳು ಸರಳವಾಗಿದ್ದು, ಒಬ್ಲಾಂಗ್ ನಿಂದ ಎಲಿಪ್ಟಿಕ್ ಆಗಿರುತ್ತವೆ.ಚರ್ಮದಂತಿರುವ ಎಲೆಗಳು, ರೋಮರಹಿತವಾಗಿರುತ್ತವೆ, ಒಟ್ಟಾರೆ ಕೀಲಿರೂಪದ ಬುಡ, ತುದಿ ಥಟ್ಟನೆ ಚೂಪಾಗಿರುತ್ತದೆ ಅಥವಾ ಮೊನಚಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಸೈಕೋನಿಯಮ್. ಓವಾಯಿಡ್ –ಎಲಿಪ್ಸಾಯಿಂಡ್, ಸಬ್ ಸೆಸ್ಸೈಲ್, ಹಳದಿ ಮಿಶ್ರಿತ ಹಸಿರು ಬಣ್ಣದಿಂದ ತಿಳಿ ಹಳದಿ ಬಣ್ಣದಲ್ಲಿರುವ ಅಂಜೂರಗಳು, ಜೋಡಿಯಾಗಿ ಎಲೆಗಳಿಲ್ಲದ ಕಿರುಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿರುತ್ತವೆ. ಒಂದೇ ಅಂಜೂರದಲ್ಲಿ ಗಂಡು, ಹೆಣ್ಣು ಮತ್ತು ಗಾಲ್ ಹೂವುಗಳಿರುತ್ತವೆ. ತೊಟ್ಟಿರುವ ಗಂಡು ಹೂವುಗಳು: ಇತರ ಹೂವುಗಳ ನಡುವೆ ಚದುರಿದಂತಿರುತ್ತವೆ, 1 ಕೇಸರವಿದ್ದು, ಒವಾಯಿಡ್ –ಎಲಿಪ್ಸಾಯ್ಡ್ ಆಕಾರದಲ್ಲಿರುವ ಪರಾಗವಿರುತ್ತದೆ. ಗಾಲ್ ಹೂವುಗಳಲ್ಲಿ: 4 ದಳಗಳಿರುತ್ತವೆ.ತೊಟ್ಟಿಲ್ಲದ ಶಾಶ್ವತವಾದ ರೀತಿಯ ಹೆಣ್ಣು ಹೂಗಳು ಉದ್ದವಾಗಿರುತ್ತವೆ; ಹಣ್ಣು ಒಂದು ಅಂಡಾಕಾರದ ಟ್ಯೂಬರ್ಕ್ಯುಲೇಟ್ ಆದ ಒಂದು ಅಕೆನ್.