ಕನ್ನಡದ ಹೆಸರು : | ಕಾಡತ್ತಿ, ಅಡವಿ ಅತ್ತಿ, ಕಲ್ಲತ್ತಿ |
ಸಾಮಾನ್ಯ ಹೆಸರು : | ಹೇರಿ ಫಿಗ್, ಆಪೋಸಿಟ್ ಲೀಫ್ ಫಿಗ್ |
ಕುಟುಂಬದ ಹೆಸರು : | ಮೊರೇಸಿ |
ವೈಜ್ಞಾನಿಕ ಹೆಸರು : | ಫಿಕಸ್ ಹಿಸ್ಪಿಡಾ ಎಲ್.ಎಫ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಜೂನ್ - ಜುಲೈ |
ಹಣ್ಣಾಗುವ ಅವಧಿ: | ಜೂನ್ - ಜುಲೈ |
ಮೂಲ: | ಏಷ್ಯಾ, ಆಸ್ಟ್ರೇಲಿಯಾ |
ತೊಗಟೆಯು ಆಂಟಿಪೀರಿಯಾಡಿಕ್, ಎಮೆಟಿಕ್ ಮತ್ತು ಟಾನಿಕ್ ಆಗಿದೆ. ಬೇರಿನ ರಸವನ್ನು ಜ್ವರಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಮತ್ತು ಅಂಜೂರದ ರಸವನ್ನು ಯಕೃತ್ತಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ
. 10 ಮೀ ಎತ್ತರದವರೆಗೆ ಇರುವ, ಒರಟಾದ ಕೂದಲುಳ್ಳ ಪೊದೆಗಳು ಅಥವಾ ಸಣ್ಣ ಮರಗಳು ; ಡೈಈಷಸ್ ಆಗಿರತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ , ಒಬ್ಲಾಂಗ್, ಅಥವಾ ಒಬೊವೇಟ್-ಒಬ್ಲಾಂಗ್ , ದಪ್ಪ ಕಾಗದದಂತಿರುತ್ತವೆ, ಅಬಾಕ್ಸಿಯಲಿ ಒರಟಾದ ಬೂದು ಕೂದಲನ್ನು ಹೊಂದಿರುತ್ತವೆ, ಅಡಾಕ್ಸಿಯಲಿ ಒರಟು ಮತ್ತು ಚಿಕ್ಕದಾದ ದಪ್ಪ ಕೂದಲನ್ನು ಹೊಂದಿರುತ್ತವೆ, ಬುಡ ದುಂಡಿನಿಂದ ಕೀಲಿ ಆಕಾರದಲ್ಲಿರುತ್ತದೆ, ತುದಿ ಅಕ್ಯೂಟ್ ನಿಂದ ಮ್ಯೂಕ್ರೊನೇಟ್ , ಅಂಚು ಸಂಪೂರ್ಣ ಅಥವಾ ಮೊಂಡು ಗರಗಸದಂತಿರುತ್ತದೆ. ಪುಷ್ಪಮಂಜರಿ ಒಂದು ಸೈಕೋನಿಯಮ್. ಅಂಜೂರದ ಹಣ್ಣುಗಳು ಸಾಮಾನ್ಯವಾಗಿ ಎಲೆಗಳಿರುವ ಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿರುತ್ತವೆ, ಕೆಲವೊಮ್ಮೆ ಎಲೆಗಳಿಲ್ಲದ ಕಿರುಕೊಂಬೆಗಳ ಮೇಲೆ ಅಥವಾ ಮುಖ್ಯ ಕೊಂಬೆಯ ಕಿರುಕೊಂಬೆಗಳ ಮೇಲೆ, ಒಂಟಿಯಾಗಿ ಅಥವಾ ಜೋಡಿಯಾಗಿ ಇರುತ್ತವೆ, ಬಲಿತ ಮೇಲೆ ಅವು ಹಳದಿ ಅಥವಾ ಕೆಂಪು ಬಣ್ಣ ಪಡೆಯುತ್ತವೆ, ಬುಗುರಿ ಆಕಾರದಲ್ಲಿದ್ದು, ನೇತಾಡುತ್ತಿರುತ್ತವೆ; ಹೊದಿಕೆಯಿರುವ ತೊಟ್ಟೆಲೆಗಳು ಇರುತ್ತವೆ; ಕೆಲವೊಮ್ಮೆ ಪಾರ್ಶ್ವದಲ್ಲಿ ತೊಟ್ಟೆಲೆಗಳು ಇರುತ್ತವೆ. ಗಂಡು ಹೂವುಗಳು: ಹಲವು ತುದಿಯ ರಂಧ್ರದ ಬಳಿ ಇರುತ್ತವೆ, 1 ಕೇಸರವಿರುತ್ತದೆ. ಗಾಲ್ ಹೂವುಗಳು: ಪುಷ್ಪಪಾತ್ರೆ ಇರುವುದಿಲ್ಲ, ಉದ್ದ ಕಡಿಮೆ ಇದ್ದು, ದಪ್ಪನಾಗಿರುತ್ತವೆ. ಹೆಣ್ಣು ಹೂವುಗಳು: ಕ್ಯಾಲಿಕ್ಸ್ ಹಾಲೆಗಳು ಇರುವುದಿಲ್ಲ; ಕೂದಲಿರುವ ಇವು ಪಾರ್ಶ್ವ ಶೈಲಿಯಲ್ಲಿರುತ್ತವೆ.