ಫಿಕಸ್ ಮೈಕ್ರೋಕಾರ್ಪಾ L.f

ಕನ್ನಡದ ಹೆಸರು : ಕಿರಿಗೋಳಿ,ಕಿರುಗೋಳಿ
ಸಾಮಾನ್ಯ ಹೆಸರು : ಚೈನೀಸ್ ಬ್ಯಾನ್ಯನ್, ಕರ್ಟೈನ್ ಫಿಗ್
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : ಫಿಕಸ್ ಮೈಕ್ರೋಕಾರ್ಪಾ L.f
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಮೇ
ಹಣ್ಣಾಗುವ ಅವಧಿ: ಮಾರ್ಚ್ - ಮೇ
ಮೂಲ: ಟ್ರಾಪಿಕಲ್ ಮತ್ತು ಸಬ್ ಟ್ರಾಪಿಕಲ್ ಏಷಿಯಾ.

ಉಪಯೋಗಗಳು

.ತೊಗಟೆಯನ್ನು ರಕ್ತಪಿತ್ತ (ರಕ್ತಸ್ರಾವ) ದೋಷಗಳು, ಹುಣ್ಣುಗಳು, ಚರ್ಮ ರೋಗಗಳು, ಉರಿಯುವ ಸಂವೇದನೆ, ಉರಿಯೂತ ಮತ್ತು ಎಡಿಮಾದ ಚಿಕಿತ್ಸೆಯಲ್ಲಿ ಚಿಕಿತ್ಸಕವಾಗಿ ಬಳಸಲಾಗುತ್ತದೆ.

ವಿವರಣೆ

15-25 ಮೀ ಎತ್ತರವಿರುವ ನಿತ್ಯಹರಿದ್ವರ್ಣ ಮರಗಳು, , ಮರದ ಮೇಲ್ಭಾಗ ಅಗಲವಾಗಿರುತ್ತದೆ, ಗಾಢ ಬೂದು ಬಣ್ಣದ ತೊಗಟೆ ಇರುತ್ತದೆ. ಹಳೆಯ ಮರದಲ್ಲಿ ತುಕ್ಕು-ಬಣ್ಣದ ಬಿಳಲುಗಳು ಉದ್ಭವಿಸುವಂತಹ ಕೊಂಬೆಗಳಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ ಆಗಿದ್ದು, ಸ್ವಲ್ಪ ಮಟ್ಟಿಗೆ ಅಂಡಾಕಾರದಲ್ಲಿರುತ್ತವೆ, ರೋಮರಹಿತದಿಂದ ಪ್ಯೂಬೆಸೆಂಟ್ ಆಗಿರುತ್ತವೆ, ಬುಡಕೀಲಿ ಆಕಾರದಲ್ಲಿರುತ್ತದೆ, ತುದಿ ಮೊಂಡು ಅಥವಾ ಸ್ವಲ್ಪ ಚೂಪಾಗಿರುತ್ತದೆ, ಅಪರೂಪವಾಗಿ ರೆಟ್ಯೂಸ್ ಆಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ; ತಳದಲ್ಲಿ ಉದ್ದವಾದ ಲ್ಯಾಟರಲ್ ವೇನ್ ಗಳಿರುತ್ತವೆ. ಅಂಜೂರದ ಹಣ್ಣುಗಳು ಜೋಡಿಯಾಗಿ ಎಲೆಗಳಿರುವ ಕಿರುಕೊಂಬೆಗಳ ಮೇಲೆ ಅಥವಾ ಎಲೆಗಳಿಲ್ಲದ ಹಳೆಯ ಕಿರುಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿರುತ್ತವೆ, ,ಮಾಗಿದಾಗ,ಹಳದಿಯಿಂದ ಸ್ವಲ್ಪ ಕೆಂಪಾಗಿರುತ್ತವೆ, ಒಳಗೆ ಕೆಲವು ಸಣ್ಣ ಬಿರುಗೂದಲುಗಳಿರುವ ಇವು, ಕುಗ್ಗಿದ ಗೋಳಾಕಾರದಲ್ಲಿರುತ್ತವೆ, ಹೂವುಗಳ ನಡುವೆ, ತೊಟ್ಟಿಲ್ಲದೆ ಅಂಟಿಕೊಂಡಿರುತ್ತವೆ(ಸೆಸೈಲ್ ಆಗಿರುತ್ತವೆ) ಒಂದೇ ಅಂಜೂರದಲ್ಲಿ ಗಂಡು, ಹೆಣ್ಣೂ ಮತ್ತು ಗಾಲ್ ಹೂವುಗಳಿರುತ್ತವೆ: ಗಂಡು ಹೂವುಗಳು: ಚದುರಿದಂತಿದ್ದು, ಸೆಸೈಲ್ ಅಥವಾ ಪೆಡಿಸೆಲ್ಲೇಟ್ ಆಗಿರುತ್ತವೆ; ತಂತು(ಫಿಲಮೆಂಟ್) ಪರಾಗದಷ್ಟೇ ಉದ್ದವಿರುತ್ತದೆ. ಗಾಲ್ ಮತ್ತು ಹೆಣ್ಣು ಹೂವುಗಳು: 3 ದಳಗಳಿದ್ದು 3, ಸುಮಾರಾಗಿ ಅಂಡಾಕಾರದಲ್ಲಿದ್ದು;ಪಾರ್ಶ್ವ ಶೈಲಿಯಲ್ಲಿರುತ್ತವೆ; ಶಲಕಾಗ್ರ ಚಿಕ್ಕದಾಗಿದ್ದು, ಗದೆಯಾಕಾರದಲ್ಲಿರುತ್ತದೆ.ಅಕಿನ್ ಗಳು ಅಂಡಾಕಾರದಲ್ಲಿರುತ್ತವೆ.