ಫಿಕಸ್ ನೆರಿಫೋಲಿಯಾ Sm.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ವಿಲ್ಲೋ ಲೀಫ್ ಫಿಗ್
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : ಫಿಕಸ್ ನೆರಿಫೋಲಿಯಾ Sm.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಭೂತಾನ್,ಬರ್ಮ,ಚೀನಾ, ಇಂಡಿಯ, ನೇಪಾಳ

ಉಪಯೋಗಗಳು

. ಗಿಡದ ಲ್ಯಾಟೆಕ್ಸ್ ಅನ್ನು ನಾಲಿಗೆಯ ಮೇಲಿನ ಹುಣ್ಣುಗಳ ಮೇಲೆ ಹಚ್ಚಲಾಗುತ್ತದೆ.ನಾಟಿ ಔಷಧಿಯಲ್ಲಿ ಕಾಂಜಂಕ್ಟಿವಿಟಿಸ್ ಮತ್ತು ರಕ್ತಕುರುಗಳ ಚಿಕಿತ್ಸೆಗೆ ಕಾಂಡದ ತೊಗಟೆಯ ರಸವನ್ನು ಬಳಸಲಾಗುತ್ತದೆ. ಇದನ್ನು ಪ್ರೂನ್ ಮಾಡಿ ಬೋನ್ಸೈಮಾದರಿಯಲ್ಲಿ ಗಿಡವನ್ನು ಬೆಳೆಯಲಾಗುತ್ತದೆ

ವಿವರಣೆ

. 15 ಮೀ ಎತ್ತರವಿರುವ, ಡೆಸಿಡುಅಸ್ ಮರಗಳು.ಗಾಢ ಬೂದು ಬಣ್ಣದ ತೊಗಟೆ, ನಯವಾಗಿರುತ್ತದೆ. ಕಿರುಕೊಂಬೆಗಳು ಹಸಿರು ಬಣ್ಣದಿಂದ ತೆಳು ಹಸಿರು ಬಣ್ಣದಲ್ಲಿದ್ದು, ಎಲೆಗಳ ಕುರುಹುಗಳು ಮತ್ತು ಕಾವಿನೆಲೆಯ ಕಲೆಗಳು ಎದ್ದುಕಾಣುವಂತಿರುತ್ತವೆ. ಎಲೆಗಳು ಸರಳ, ಎಲಿಪ್ಟಿಕ್ , ಒವೇಟ್ , ಒವೇಟ್ –ಎಲಿಪ್ಟಿಕ್ , ಮೇಲೆ ಮತ್ತು ಕೆಳಗಿನ ಎರಡೂ ಮೇಲ್ಮೈಗಳು ರೋಮರಹಿತವಾಗಿದ್ದು ಹಸಿರಾಗಿರುತ್ತವೆ, ಅಕ್ಷೀಯವಾಗಿ ದಟ್ಟವಾದ ಸಿಸ್ಟೋಲಿತ್‌ಗಳಿಂದ ಆವೃತವಾಗಿರುತ್ತವೆ, ಅಡಾಕ್ಸಿಯಾಲಿ ನಯವಾಗಿರುತ್ತವೆ, ಬುಡ ಕ್ಯೂನೇಟ್‌ನಿಂದ ದುಂಡಾಗಿರುತ್ತದೆ, ತುದಿ ಮೊನಚಾಗಿ ಬಾಲದಂತಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ಸೈಕೋನಿಯಮ್. ಎಲೆಗಳಿರುವ ಅಥವಾ ಎಲೆಗಳಿಲ್ಲದ ಹಳೆಯ ಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿ , ಕೊಂಚ ಉರುಳೆ ಆಕಾರ, ಅಂಡಾಕಾರ, ದಪ್ಪ ಅಥವಾ ತೆಳ್ಳಗಿನ ಕಾರ್ಪೊಡರ್ಮಿಸ್ ಮತ್ತು ಕಲ್ಲಿನ ಕೋಶಗಳೊಂದಿಗೆ ಅಥವಾ ಇಲ್ಲದೆ, ಒಳಭಾಗದಲ್ಲಿ ಬಿರುಗೂದಲುಗಳಿಲ್ಲದ, ತುದಿಯಲ್ಲಿ ಹೊಕ್ಕುಳಿನಂತಿರುವ ರಂಧ್ರ ಉಳ್ಳ ಅಂಜೂರಗಳು ಜೋಡಿಯಾಗಿ ಇರುತ್ತವೆ.ಸೆಸೈಲ್ ಆಗಿರುತ್ತವೆ. ಗಂಡು ಹೂವುಗಳು: ಪೆಡಿಸಲೇಟ್ ಆದ ಹಲವಾರು ಹೂಗಳು, ಪುಷ್ಪಪಾತ್ರೆಯ ಹಾಲೆಗಳು 3 ಅಥವಾ 4, ಒವೇಟ್-ಲ್ಯಾನ್ಸಿಲೇಟ್; 2 ಅಥವಾ 3 ಕೇಸರಗಳಿರುತ್ತವೆ. ಗಾಲ್ ಹೂವುಗಳು: ಅಂಡಾಕಾರದ ಅಂಡಾಶಯವಿರುವ, ಚಿಕ್ಕದಾದ ಕೆಲವೇ ಹೂಗಳಿರುತ್ತವೆ. ಹೆಣ್ಣು ಮತ್ತು ಗಾಲ್ ಹೂವುಗಳು: ಪುಷ್ಪಪಾತ್ರೆಯ ಹಾಲೆಗಳು 3 ಅಥವಾ 4; ಹೆಣ್ಣು ಹೂಗಳು: ಗೋಳಾಕಾರದ ಅಂಡಾಶಯ; ತೆಳುವಾದ ಶೈಲಿ . ನಯವಾದ ಅಕಿನ್.