ಫಿಕಸ್ ರೇಸೆಮೋಸಾ ಎಲ್.
ಕನ್ನಡದ ಹೆಸರು : | ಅತ್ತಿ ಮರ |
ಸಾಮಾನ್ಯ ಹೆಸರು : | Cluster fig |
ಕುಟುಂಬದ ಹೆಸರು : | ಮೊರೇಸಿ |
ವೈಜ್ಞಾನಿಕ ಹೆಸರು : | ಫಿಕಸ್ ರೇಸೆಮೋಸಾ ಎಲ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಡೆಸಿಡುಅಸ್ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ಜನವರಿ - ಏಪ್ರಿಲ್ |
ಹಣ್ಣಾಗುವ ಅವಧಿ: | ಮಾರ್ಚ್ - ಜುಲೈ |
ಮೂಲ: | ಆಸ್ಟೇಲಿಯ, ಟ್ರಾಪಿಕಲ್ ಏಷಿಯಾ |
.ತೊಗಟೆಯನ್ನು ನೀರಿನ ಜೊತೆಗೆ ಕಲ್ಲಿನ ಮೇಲೆ ಉಜ್ಜಿ ಪೇಸ್ಟ್ ತಯಾರಿಸಬಹುದು, ಇದನ್ನು ಕೀವುಗುಳ್ಳೆ ಅಥವಾ ಸೊಳ್ಳೆ ಕಚ್ಚಿದ ಜಾಗದ ಮೇಲೆ ಹಚ್ಚಬಹುದು. ಗಿಡದ ಒರಟಾದ ಎಲೆಗಳನ್ನು ಚರ್ಮದಲ್ಲಿ ಒಳಹೊಕ್ಕಿರುವ ಕಂಬಳಿಹುಳುವಿನ ಬಿರುಗೂದಲುಗಳನ್ನು ತೆಗೆದುಹಾಕಲು ಸಹ ಬಳಸಬಹುದು.ಸಾಮಾನ್ಯವಾಗಿ ನಾಟಿ ಪದ್ಧತಿಯಲ್ಲಿ, ತೊಂದರೆ ಇರುವ ಜಾಗವನ್ನು ಎಲೆಗಳಿಂದ ಹಗುರವಾಗಿ ಉಜ್ಜಲಾಗುತ್ತದೆ, ಇದು ಚುಚ್ಚುವ ಕೂದಲನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.
25-30 ಮೀ ಎತ್ತರದ, ನಿತ್ಯಹರಿದ್ವರ್ಣ, ಅಪರೂಪವಾಗಿ ಡೆಸಿಡುಅಸ್ ಆಗುವ ಮರಗಳು. ತೊಗಟೆ ನಯವಾಗಿದ್ದು ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ. ಕಿರುಕೊಂಬೆಗಳು, ಎಲೆಯ ಎಸಳುಗಳು ಮತ್ತು ಅಂಜೂರದ ಹಣ್ಣುಗಳು ಬಾಗಿದ ಕೂದಲಿನಿಂದ ಅಥವಾ ದಟ್ಟವಾದ ಬಿಳಿಯಾದ ಮೃದು ತುಪ್ಪಳದಿಂದ ಮುಚ್ಚಲ್ಪಟ್ಟಿರುತ್ತವೆ.ಕಂದು ಬಣ್ಣದ ಕಿರುಕೊಂಬೆಗಳಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ , ಎಲಿಪ್ಟಿಕ್ –ಒಬೊವೇಟ್ , ಎಲಿಪ್ಟಿಕ್ ಅಥವಾ ಸ್ವಲ್ಪ ಎಲಿಪ್ಟಿಕ್, ಅಬಾಕ್ಸಿಯಾಲಿ ತೆಳು ಹಸಿರು, ಎಳೆಯದಾಗಿದ್ದಾಗ ಪ್ಯೂಬೆಸೆಂಟ್ , ರೋಮರಹಿತ, ಅಡಾಕ್ಸಿಯಾಲಿ ಕಡು ಹಸಿರು ಮತ್ತು ರೋಮರಹಿತವಾಗಿರುತ್ತವೆ, ಬುಡ ಕ್ಯೂನೇಟ್‌ನಿಂದ ಒಬ್ಟ್ಯೂಸ್ , ತುದಿ ಅಕ್ಯುಮಿನೇಟ್ ನಿಂದ ಒಬ್ಟ್ಯೂಸ್, ಅಂಚು ಸಂಪೂರ್ಣವಾಗಿರುತ್ತದೆ. ಅಂಜೂರದ ಹಣ್ಣುಗಳು ಒಟ್ಟುಗೂಡಿದ ಗಡ್ಡೆಗಳಂತೆ ಹಳೆಯ ಕಾಂಡದ ಗಿಡ್ಡನೆಯ ಕಿರುಕೊಂಬೆಗಳ ಮೇಲೆ, ಅಪರೂಪವಾಗಿ ಚಿಗುರೆಲೆಗಳ ಮೇಲೆ ಅಥವಾ ಎಲೆಗಳಿಲ್ಲದ ಹಳೆಯ ಕಿರುಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿ, ಜೋಡಿಯಾಗಿ ಇರುತ್ತವೆ. ಪೇರಳೆ-ಆಕಾರದಲ್ಲಿರುವ ಈ ಹಣ್ಣುಗಳು, ಬಲಿತಾಗ ಕೆಂಪು ಕಿತ್ತಳೆ ಬಣ್ಣ ಪಡೆಯುತ್ತವೆ. ತ್ರಿಕೋನ-ಅಂಡಾಕಾರದ,ಆವರಣಕ್ಕೆ ಹೊಂದುವ ತೊಟ್ಟೆಲೆಗಳು. ಒಂದೇ ಅಂಜೂರದಲ್ಲಿ ಗಂಡು, ಹೆಣ್ಣು ಮತ್ತು ಗಾಲ್ ಹೂವುಗಳಿರುತ್ತವೆ. ಗಂಡು ಹೂವುಗಳು: ತುದಿಯ ರಂಧ್ರದ ಬಳಿ, ಸೆಸೈಲ್ ಆಗಿರುತ್ತವೆ; ಪುಷ್ಪ ಪಾತ್ರೆಯ ಹಾಲೆಗಳು 3 ಅಥವಾ 4;2 ಕೇಸರಗಳಿರುತ್ತವೆ. ಗಾಲ್ ಮತ್ತು ಹೆಣ್ಣು ಹೂವುಗಳು: ಪೆಡಿಸೆಲ್ಲೇಟ್; ಲೀನಿಯರ್ ಆದ ಪುಷ್ಪಪಾತ್ರೆಯ ಹಾಲೆಗಳು, 3- ಅಥವಾ 4-ಹಲ್ಲುಳ್ಳ ತುದಿ; ಶೈಲಿ ಪಾರ್ಶ್ವ; ಗದೆಯಾಕಾರದ ಶಲಕಾಗ್ರ.