ಫಿಕಸ್ ರಿಲಿಜಿಯೋಸಾ ಎಲ್.

ಕನ್ನಡದ ಹೆಸರು : ಅರಳಿ ಮರ
ಸಾಮಾನ್ಯ ಹೆಸರು : ಸೇಕ್ರೆಡ್ ಫಿಗ್
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : ಫಿಕಸ್ ರಿಲಿಜಿಯೋಸಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ನವೆಂಬರ್-ಡಿಸೆಂಬರ್
ಹಣ್ಣಾಗುವ ಅವಧಿ: ಏಪ್ರಿಲ್-ಮೇ
ಮೂಲ: ಭಾರತದ ಉಪಖಂಡ

ಉಪಯೋಗಗಳು

.ಆಸ್ತಮಾ, ಮಧುಮೇಹ, ಅತಿಸಾರ, ಅಪಸ್ಮಾರ, ಗ್ಯಾಸ್ಟ್ರಿಕ್ ಸಮಸ್ಯೆಗಳು, ಉರಿಯೂತದ ಅಸ್ವಸ್ಥತೆಗಳು, ಸಾಂಕ್ರಾಮಿಕ ಮತ್ತು ಲೈಂಗಿಕ ಅಸ್ವಸ್ಥತೆಗಳು ಸೇರಿದಂತೆ ಸುಮಾರು ಐವತ್ತು ವಿಧದ ಅಸ್ವಸ್ಥತೆಗಳಿಗೆ ಫಿಕಸ್ ರಿಲಿಜಿಯೋಸೈಸ್ ಅನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.

ವಿವರಣೆ

. ಚಿಕ್ಕದಾಗಿದ್ದಾಗ ಎಪಿಫಿಟಿಕ್ ಆಗಿರುವ,15-25 ಮೀ ಎತ್ತರದ ಡೆಸಿಡುಅಸ್ ಅಥವಾ ಅರೆನಿತ್ಯಹರಿದ್ವರ್ಣ ಮರಗಳು. ತೊಗಟೆ, ನಯವಾಗಿದ್ದು, ಬೂದು ಬಣ್ಣದಲ್ಲಿರುತ್ತದೆ.ಅದರಿಂದ ಜಿನುಗುವ ವಸ್ತು ಹಾಲಿನಂತಿರುತ್ತದೆ. ಕಿರುಕೊಂಬೆಗಳು ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ, ಚಿಕ್ಕದಾಗಿದ್ದಾಗ ಒತ್ತಾಗಿಲ್ಲದ ಮೃದುತುಪ್ಪಳವಿರುತ್ತದೆ. ಎಲೆಗಳು ಸರಳ, ಆಲ್ಟರ್ನೇಟ್ , ಚರ್ಮದಂತಿದ್ದು, ಎಲೆಯ ಬ್ಲೇಡ್ ಟ್ರೈಅಂಗ್ಯುಲಾರ್ –ಒವೇಟ್ ಆಗಿರುತ್ತವೆ, ಅಬಾಕ್ಸಿಯಾಲಿ ಹಸಿರು, ಅಡಾಕ್ಸಿಯಾಲಿ ಹೊಳೆವ ಕಡು ಹಸಿರು ಬಣ್ಣದಲ್ಲಿರುತ್ತವೆ, ಒಟ್ಟಾರೆಯಾಗಿ ಬುಡ ಕ್ಯೂನಿಟ್ ನಿಂದ ಕಾರ್ಡೇಟ್, ತುದಿ ಅಕ್ಯುಮಿನೇಟ್ -ಕಾಡೇಟ್, ಅಂಚು ಸಂಪೂರ್ಣವಾಗಿರುತ್ತದೆ ಅಥವಾ ಅಲೆಯಾಕಾರದಲ್ಲಿರುತ್ತದೆ. ಪುಷ್ಪ ಮಂಜರಿ ಒಂದು ಸೈಕೋನಿಯಮ್. ಅಂಜೂರದ ಹಣ್ಣುಗಳು, ಜೋಡಿಯಾಗಿ ಅಥವಾ ಒಂಟಿಯಾಗಿ ಎಲೆಗಳ ಕಿರುಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿರುತ್ತವೆ, ಒಳಗೆ ಯಾವುದೇ ಬಿರುಗೂದಲುಗಳಿರುವುದಿಲ್ಲ,ಬಲಿತಾಗ ಗ್ಲೋಬೋಸ್ ನಿಂದ ಕುಗ್ಗಿದ ಗ್ಲೋಬಾಸ್ ಆಗುವ ಈ ಹಣ್ಣು ನಯವಾಗಿದ್ದು ಕೆಂಪು ಬಣ್ಣ ಪಡೆಯುತ್ತದೆ. ಹೂಗಳು ಏಕಲಿಂಗಿಯಾಗಿರುತ್ತವೆ; ಆಸ್ಟಿಯೋಲಾರ್ ಆದ ಗಂಡು ಹೂವುಗಳು, ಆಸ್ಟಿಯೋಲಾರ್, ಒಂದು ವರ್ತುಲದಲ್ಲಿ ಅಂಟಿಕೊಂಡಿರುತ್ತವೆ (ಸೆಸೈಲ್ ಆಗಿರುತ್ತವೆ); ಕಂದು ಬಣ್ಣದ ಹೆಣ್ಣು ಹೂಗಳು ರೋಮರಹಿತವಾಗಿದ್ದು, ಸೆಸ್ಸೈಲ್ ಆಗಿರುತ್ತವೆ; ಗಾಲ್ ಹೂವುಗಳು ಹೆಣ್ಣು ಹೂವುಗಳನ್ನು ಹೋಲುತ್ತವೆ. ಅಕಿನ್ ಗಳು ನುಣುಪಾಗಿರುತ್ತವೆ.