ಫಿಕಸ್ ವಿರೆನ್ಸ್ ಐಟನ್

ಕನ್ನಡದ ಹೆಸರು : ಬಸರಿ ಮರ, ಕರಿ ಬಸರಿ
ಸಾಮಾನ್ಯ ಹೆಸರು : ವೈಟ್ ಫಿಗ್
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : ಫಿಕಸ್ ವಿರೆನ್ಸ್ ಐಟನ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಪಾಕಿಸ್ತಾನ, ಸೌತ್ ಈಸ್ಟ್ ಏಷಿಯಾ,ಆಸ್ಟ್ರೇಲಿಯ

ಉಪಯೋಗಗಳು

ತೊಗಟೆಯ ಕಷಾಯವನ್ನು ಲ್ಯುಕೋರಿಯಾ ಚಿಕಿತ್ಸೆಯಲ್ಲಿ ಇಂಜೆಕ್ಟ್ ಮಾಡಲಾಗುತ್ತದೆ. ಬಾಹ್ಯವಾಗಿ ತೊಗಟೆಯ ಕಷಾಯವನ್ನು ಹುಣ್ಣುಗಳ ಮೇಲೆ ತೊಳೆಯಲು ಮತ್ತು ಜೊಲ್ಲಿನ ಉತ್ಪಾದನೆಗೆ ಮುಕ್ಕಳಿಸಲು ಬಳಸಲಾಗುತ್ತದೆ..

ವಿವರಣೆ

. ಡೆಸಿಡುಅಸ್ ಅಥವಾ ಸೆಮಿ ಡೆಸಿಡುಅಸ್ ಮರಗಳು, ಚಿಕ್ಕದಾಗಿದ್ದಾಗ ಎಪಿಫಿಟಿಕ್ ಆಗಿರುತ್ತವೆ, ಬಟ್ರೆಸ್ ಅಥವಾ ಆಸರೆ ಬೇರುಗಳನ್ನು ಹೊಂದಿರುವ ಈ ಮರಗಳ ತೊಗಟೆ ಹಸಿರು ಮಿಶ್ರಿತ ಬೂದು ಬಣ್ಣದಲ್ಲಿದ್ದು, ನಯವಾಗಿರುತ್ತದೆ.ಎಲೆಗಳು ಸರಳ, ಅಲ್ಟರ್ನೇಟ್, ಒಬೊವೇಟ್ , ಸ್ವಲ್ಪ ಲ್ಯಾನ್ಸಿಲೇಟ್,ಒವೇಟ್-ಲ್ಯಾನ್ಸಿಲೇಟ್, ಅಥವಾ ಎಲಿಪ್ಟಿಕ್-ಒವೇಟ್, ತೆಳುವಾದ ಚರ್ಮದಂತಿರುತ್ತವೆ, ಬುಡ ಮೊಂಡು ದುಂಡು, ಕ್ಯೂನಿಯೇಟ್ ಅಥವಾ ಕಾರ್ಡೇಟ್, ತುದಿ ಮೊನಚು, ಸ್ವಲ್ಪ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ಸೈಕೋನಿಯಮ್. ಅಂಜೂರವು ಎಲೆಗಳಿರುವ ಕಿರುಕೊಂಬೆಗಳ ಮೇಲೆ ಅಕ್ಷಾಕಂಕುಳಿನಲ್ಲಿ, ಜೋಡಿಯಾಗಿ ಅಥವಾ ಒಂಟಿಯಾಗಿ ಅಥವಾ ಎಲೆಗಳಿಲ್ಲದ ಹಳೆಯ ಕಿರುಕೊಂಬೆಗಳ ಮೇಲೆ ಗೊಂಚಲುಗಳಲ್ಲಿರುತ್ತವೆ, ಬಲಿತಾಗ ಕೆನ್ನೇರಳೆ ಕೆಂಪು ಬಣ್ಣಕ್ಕೆ ತಿರುಗಿ, ಗ್ಲೊಬೋಸ್ ಆಗಿರುತ್ತವೆ. ಹೂಗಳು ಏಕಲಿಂಗಿಯಾಗಿದ್ದು ಎಲ್ಲಾ ಹೂಗಳು ಒಂದೇ ಅಂಜೂರದೊಳಗಿರುತ್ತವೆ. ಗಂಡು ಹೂಗಳ ಸಂಖ್ಯೆ ಕಡಿಮೆ ಇದ್ದು, ತುದಿಯ ರಂಧ್ರದ ಬಳಿ, ಸೆಸೈಲ್ ಆಗಿರುತ್ತವೆ; ಹೆಣ್ಣು ಮತ್ತು ಗಾಲ್ ಹೂವುಗಳು ಪೆಡಿಸಲೇಟ್ ಆಗಿರುತ್ತವೆ. ಅಕಿನ್ ಗಳ ಹೊರಭಾಗ ಸುಕ್ಕುಗಟ್ಟಿರುತ್ತದೆ.