ಫಿಲಿಸಿಯಮ್ ಡೆಸಿಪಿಯನ್ಸ್ (ವೈಟ್ & ಅರ್ನ್.) ಥ್ವೈಟ್ಸ್

ಕನ್ನಡದ ಹೆಸರು :
ಸಾಮಾನ್ಯ ಹೆಸರು : ಫರ್ನ್ ಟ್ರೀ, ಜಾರಿ ಗಿಡ
ಕುಟುಂಬದ ಹೆಸರು : ಸಪಿಂಡೇಸಿ
ವೈಜ್ಞಾನಿಕ ಹೆಸರು : ಫಿಲಿಸಿಯಮ್ ಡೆಸಿಪಿಯನ್ಸ್ (ವೈಟ್ & ಅರ್ನ್.) ಥ್ವೈಟ್ಸ್
ಪ್ರಭೇದದ ಪ್ರಕಾರ: Endemicಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಅಕ್ಟೋಬರ್ - ಡಿಸೆಂಬರ್
ಹಣ್ಣಾಗುವ ಅವಧಿ: ಅಕ್ಟೋಬರ್ - ಡಿಸೆಂಬರ್
ಮೂಲ: ಪಶ್ಚಿಮ ಘಟ್ಟಗಳು

ಉಪಯೋಗಗಳು

ಇದನ್ನು ಸಾಂಪ್ರದಾಯಿಕವಾಗಿ ಭಾರತ ಮತ್ತು ಶ್ರೀಲಂಕಾದಲ್ಲಿ ಇದನ್ನು ಮಧುಮೇಹ ವಿರೋಧಿ ಏಜೆಂಟ್ ಆಗಿ ಬಳಸಲಾಗುತ್ತದೆ. ಇದರಲ್ಲಿ ಆಂಟಿ-ಫಂಗಲ್, ಆಂಟಿ- ಇನ್ಫ್ಲಮೇಟರಿ,ಆಂಟಿ ಆಕ್ಸಿಡೆಂಟ್ ಮತ್ತು ಮೊಲುಸಿಸಿಡಲ್ ಚಟುವಟಿಕೆಗಳಂತಹ ಹಲವಾರು ಜೈವಿಕ ಚಟುವಟಿಕೆಯ ಗುಣಗಳು ಕಂಡು ಬರುತ್ತವೆ.

ವಿವರಣೆ

. 4.5-20 ಮೀ ಎತ್ತರವಿರುವ, ಚಿಕ್ಕ ಅಥವಾ ಮಧ್ಯಮ ಗಾತ್ರದ ನಿತ್ಯಹರಿದ್ವರ್ಣ ಮರ. ತೊಗಟೆ ನಯವಾಗಿದ್ದು, ಬಿಳಿಯಾಗಿರುತ್ತದೆ. ಎಲೆಗಳು ಪಿನ್ನೇಟ್, ಆಲ್ಟರ್ನೇಟ್, ತೊಟ್ಟುಗಳಿಗೆ ರೆಕ್ಕೆಗಳಿರುತ್ತವೆ. 5-10 ಜೋಡಿ ಚಿಗುರೆಲೆಗಳು, ಸಬ್-ಆಪೊಸಿಟ್ ಅಥವಾ ಆಲ್ಟರ್ನೇಟ್ ಆಗಿರುತ್ತವೆ, ಲ್ಯಾನ್ಸಿಲೇಟ್‌ನಿಂದ ರೇಖೀಯ ಅಥವಾ ಸ್ವಲ್ಪ ಒಬ್ಲಾಂಗ್ – ಎಲಿಪ್ಟಿಕ್ ಆಗಿದ್ದು, ರೋಮರಹಿತವಾಗಿರುತ್ತವೆ, ಚೂಪಾದ ಬುಡ, ತುದಿ ಚೂಪಾಗಿರುತ್ತದೆ ಮತ್ತು ಸೂಕ್ಷ್ಮವಾಗಿ ಗರಗಸದಂತಿರುತ್ತದೆ, ಸಂಪೂರ್ಣವಾಗಿರುವ ಅಂಚು, ಗರಿಗರಿಯಾಗಿದ್ದು-ಅಲೆಯಂತಿರುತ್ತದೆ, ಎಳೆಯದಾಗಿದ್ದಾಗ ರೆಸಿನಸ್ ಆಗಿರುತ್ತದೆ. ಪುಷ್ಪಮಂಜರಿ ಒಂದು ಟರ್ಮಿನಲ್ ಪ್ಯಾನಿಕಲ್. ಹೂಗಳು ಪಾಲಿಗ್ಯಾಮಸ್ ಆಗಿದ್ದು ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು 1-1.5 ಸೆಂ.ಮೀ ಉದ್ದವಿರುವ, ಒಬ್ಲಾಂಗ್ ಅಥವಾ ಉಪಗೋಳಾಕಾರದ,ಒಂದು ಗೊರಟೆ ಹಣ್ಣು , ನುಣುಪಾಗಿದ್ದು , ಗಾಢ ನೇರಳೆ ಬಣ್ಣದಲ್ಲಿರುತ್ತದೆ.