ಕನ್ನಡದ ಹೆಸರು : | ಬಿಳಿಹುಳಿ, ಕಂಡೆಕುವನ |
ಸಾಮಾನ್ಯ ಹೆಸರು : | ಬುಷ್ ವೀಡ್ |
ಕುಟುಂಬದ ಹೆಸರು : | ಫಿಲಾಂಥೇಸಿ |
ವೈಜ್ಞಾನಿಕ ಹೆಸರು : | ಫ್ಲುಗೆಜಿಯಾ ಲ್ಯುಕೋಪೈರಸ್ ವಿಲ್ಡ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಏಪ್ರಿಲ್ - ಜುಲೈ |
ಹಣ್ಣಾಗುವ ಅವಧಿ: | ಜೂನ್ - ಸೆಪ್ಟೆಂಬರ್ |
ಮೂಲ: | ಆಫ್ರಿಕಾ, ದಕ್ಷಿಣ ಅಮೇರಿಕಾ |
ಎಲೆಗಳನ್ನು ಕಾಮೋತ್ತೇಜಕ ಮತ್ತು ವಿರೇಚಕ ಎಂದು ಪರಿಗಣಿಸಲಾಗುತ್ತದೆ. ತೊಗಟೆ ಒಂದು ಸ್ರಾವನಿರೋಧಕವಾಗಿದೆ. ಪಚನಕ್ಕೆ ಸಂಬಧಿಸಿದ ಅಸ್ವಸ್ಥತೆಗಳನ್ನು ನಿವಾರಿಸಲು ಬೇಳೆಕಾಳುಗಳೊಂದಿಗೆ ಹಣ್ಣನ್ನು ಬೆರೆಸಿ ತಿನ್ನಲಾಗುತ್ತದೆ.
.ಇದು 1.5-4 ಮೀ ಎತ್ತರದ ನೆಟ್ಟಗಿರುವ ಪೊದೆಸಸ್ಯವಾಗಿದೆ, ಇದರ ಶಾಖೆಗಳು ಉರುಳೆಯಾಕಾರ ಅಥವಾ ಎಳೆಯದಾಗಿದ್ದಾಗ ಮೊಂಡಾದ ಕೋನೀಯವಾಗಿರುತ್ತವೆ, ಬೂದು ಬಣ್ಣದಲ್ಲಿದ್ದು , ಕೊನೆಯಲ್ಲಿ ಮುಳ್ಳುಗಳಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ , ಎಲಿಪ್ಟಿಕ್ , ಒಬೊವೇಟ್ , ಅಥವಾ ದುಂಡಗಿರುತ್ತವೆ, ಪೊರೆಯಂತಿದ್ದು, ರೋಮರಹಿತವಾಗಿರುತ್ತವೆ, ಕೀಲಿ ಆಕಾರದ ಬುಡ, ತುದಿ ನಾಚ್ಡ್ ಆಗಿದ್ದು, ಅಂಚು ಸಂಪೂರ್ಣವಾಗಿರುತ್ತದೆ. ಗಂಡು ಪುಷ್ಪ ಮಂಜರಿ ಒಂದು ಸೈಮ್, ಹೆಣ್ಣು ಪುಷ್ಪ ಮಂಜರಿ ಸಬ್-ಸಾಲಿಟರಿಯಾಗಿರುತ್ತದೆ, ಪುಟ್ಟ ಹಳದಿ ಅಥವಾ ಹಸಿರು-ಬಿಳಿ ಬಣ್ಣದಲ್ಲಿರುವ ಹೂವುಗಳು ಏಕಲಿಂಗಿಗಳಾಗಿರುತ್ತವೆ. ಹಣ್ಣು ಸುಮಾರಾಗಿ ಗೋಳಾಕಾರದಲ್ಲಿರುವ ಕ್ಯಾಪ್ಸುಲ್ ಆಗಿರುತ್ತದೆ, ಅದರ ವ್ಯಾಸ ಸುಮಾರು 4 ಮಿಮೀ ಇದ್ದು, ಮಾಗಿದಾಗ ಬಿಳಿ ಬಣ್ಣ ಪಡೆಯುತ್ತದೆ.ಗೋಳಾಕಾರದ 1 ಬೀಜವಿರುತ್ತದೆ.