ಅಲ್ಬಿಜಿಯಾ ಜೂಲಿಬ್ರಿಸಿನ್ ಡ್ಯುರಾಜ್.

ಕನ್ನಡದ ಹೆಸರು : ಚೇಲಾ
ಸಾಮಾನ್ಯ ಹೆಸರು : ಗುಲಾಬಿ ರೇಷ್ಮೆ ಮರ, ಪರ್ಷಿಯನ್ ರೇಷ್ಮೆ ಮರ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಅಲ್ಬಿಜಿಯಾ ಜೂಲಿಬ್ರಿಸಿನ್ ಡ್ಯುರಾಜ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಏಪ್ರಿಲ್ - ಜೂನ್
ಹಣ್ಣಾಗುವ ಅವಧಿ: ಆಗಸ್ಟ್ - ಸೆಪ್ಟೆಂಬರ್
ಮೂಲ: ನೈಋತ್ಯ ಮತ್ತು ಪೂರ್ವ ಏಷ್ಯಾ

ಉಪಯೋಗಗಳು

.ಚುರುಚುರಿಕೆ ಗಿಡದಿಂದಾಗುವ ತುರಿಕೆಯ ಸಮಸ್ಯೆಗೆ ಇದರ ಎಲೆಗಳನ್ನು ಉಜ್ಜಿ ತೆಗೆದ ರಸವನ್ನು ದದ್ದಾದ ಜಾಗಕ್ಕೆ ಸವರಿ ಚಿಕಿತ್ಸೆ ನೀಡಬಹುದು. ಬಹುಮಟ್ಟಿಗೆ ಪರಿಹಾರ ಆ ಕ್ಷಣವೇ ಸಿಗುತ್ತದೆ. ಹೂವುಗಳು ಮತ್ತು ಕಾಂಡದ ತೊಗಟೆಯನ್ನು ಔಷಧ ತಯಾರಿಸಲು ಬಳಸಲಾಗುತ್ತದೆ.

ವಿವರಣೆ

.6-15ಮೀ ಎತ್ತರವಿರುವ, ಚಿಕ್ಕ ಗಾತ್ರದಿಂದ ಮಧ್ಯಮ ಗಾತ್ರದ ಮರ. ತೊಗಟೆಯು ತಿಳಿ ಕಂದು ಬಣ್ಣದ್ದಾಗಿದ್ದು, ಬಹುತೇಕ ನಯವಾಗಿರುತ್ತದೆ ಮತ್ತು ಸಾಮಾನ್ಯವಾಗಿ ತೆಳುವಾಗಿರುವ ಅದರ ಕಾಂಡದ ಉದ್ದಕ್ಕೂ ಲೆನ್ಸ್ ಆಕಾರದ ಜಾಗಗಳಿರುತ್ತವೆ. ಎಲೆಗಳು ದೊಡ್ಡದಾಗಿರುತ್ತವೆ, 10-35 ಜೋಡಿ ಚಿಗುರೆಲೆಗಳೊಂದಿಗೆ ಬೈಪಿನ್ನೇಟ್ಲಿ ಕಾಂಪೌಂಡ್ ಆಗಿರುತ್ತವೆ, ಕಾಂಡಗಳ ಉದ್ದಕ್ಕೂ ಅನೇಕ ಆಯತಾಕಾರದ ಚಿಗುರೆಲೆಗಳು ಆಲ್ಟರ್ನೇಟ್ ಆಗ ಕಾಂಡಗಳ ಉದ್ದಕ್ಕೂ ಇರುತ್ತವೆ. ಗುಲಾಬಿ ಪರಿಮಳದ, ಆಕರ್ಷಣೀಯವಾದ ಹೂಗಳು, ಪೊಂಪೊಮ್ಗಳನ್ನು ಹೋಲುತ್ತವೆ ಮತ್ತು ಕೊಂಬೆಗಳ ತುದಿಯಲ್ಲಿ ಹೂಗೊಂಚಲುಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ. ಹಣ್ಣುಗಳು ಚಪ್ಪಟೆಯಾಗಿದ್ದು, ಅದರ ಒಣಹುಲ್ಲಿನ ಬಣ್ಣದ ಬೀಜಕೋಶಗಳಲ್ಲಿ ತಿಳಿ ಕಂದು ಬಣ್ಣದ ಅಂಡಾಕಾರದ ಬೀಜಗಳಿರುತ್ತವೆ.