ಐಗಾರ್ಸಿನಿಯಾ ಲಿವಿಂಗ್‌ಸ್ಟೋನಿ ಟಿ.ಆಂಡರ್ಸನ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಆಫ್ರಿಕನ್ ಮ್ಯಾಂಗೋಸ್ಟೀನ್
ಕುಟುಂಬದ ಹೆಸರು : ಕ್ಲೂಸಿಯೇಸಿ
ವೈಜ್ಞಾನಿಕ ಹೆಸರು : ಐಗಾರ್ಸಿನಿಯಾ ಲಿವಿಂಗ್‌ಸ್ಟೋನಿ ಟಿ.ಆಂಡರ್ಸನ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜೂನ್-ಸೆಪ್ಟೆಂಬರ್
ಹಣ್ಣಾಗುವ ಅವಧಿ: ಜೂನ್- ಸೆಪ್ಟೆಂಬರ್
ಮೂಲ: ದಕ್ಷಿಣ ಆಫ್ರಿಕಾ

ಉಪಯೋಗಗಳು

.ಗಾರ್ಸಿನಿಯಾ ಲಿವಿಂಗ್‌ಸ್ಟೋನಿಯದ ಬೇರು ಮತ್ತು ತೊಗಟೆಯಲ್ಲಿ ಚಿಕಿತ್ಸಕ ಗುಣಗಳಿವೆ ಮತ್ತು ಅವುಗಳನ್ನು ಕ್ಯಾನ್ಸರ್ ಮತ್ತು ಕ್ಷಯರೋಗದ ಬೆಳವಣಿಗೆಯನ್ನು ತಡೆಯಲು ಬಳಸಲಾಗುತ್ತದೆ. ಸಸ್ಯ ಉತ್ಕರ್ಷಣ ನಿರೋಧಕ ಗುಣಗಳನ್ನೂ ಒಳಗೊಂಡಿದೆ.

ವಿವರಣೆ

.18 ಮೀ ಎತ್ತರದವರೆಗೆ ಇರುವ ನಿತ್ಯಹರಿದ್ವರ್ಣ ಮರ. ಕಾಂಡಗಳು ಚಿಕ್ಕದಾಗಿರುತ್ತವೆ, ಅಲ್ಲಲ್ಲಿ ತಿರುಚಿರುತ್ತವೆ, ಹಲವೊಮ್ಮೆ ಹಲವು ಕಾಂಡಗಳನ್ನು ಹೊಂದಿರುತ್ತವೆ. ತೊಗಟೆ ಕೆಂಪು ಕಂದು ಬಣ್ಣದಿಂದ ಕಡು ಬೂದು ಬಣ್ಣದಲ್ಲಿರುತ್ತದೆ, ಆಳವಿಲ್ಲದ ಗ್ರೂವ್ ಗಳು ಅಥವಾ ಆಳವಾದ ಸೀಳುಗಳಿದ್ದು,ಏಣುಗೆರೆ ಮತ್ತು ಚಕ್ಕೆಗಳಿರುತ್ತವೆ, ಕತ್ತರಿಸಿದಾಗ ಹಳದಿ ಅಥವಾ ಕೆಂಪು ರಾಳದ ಲ್ಯಾಟೆಕ್ಸ್ ಜಿನುಗುತ್ತದೆ. ಎಲೆಗಳು ಸರಳವಾಗಿರುತ್ತವೆ, 3 ರ ಸುರುಳಿಗಳಲ್ಲಿರುತ್ತವೆ, ಚರ್ಮದಂತಿದ್ದು, ಸುಲಭವಾಗಿ ಮುರಿಯುತ್ತವೆ, ಆಕಾರದಲ್ಲಿ ವ್ಯತ್ಯಾಸವಿದ್ದು, ಲ್ಯಾನ್ಸಿಲೇಟ್ ಅಥವಾ ಒಬ್ಲ್ಯಾನ್ಸಿಯಲೇಟ್ ನಿಂದ ಒಬ್ಲಾಂಗ್ ಅಥವಾ ಒಬೊವೇಟ್ ಆಗಿದ್ದು , ರೋಮರಹಿತವಾಗಿರುತ್ತವೆ, ಒಟ್ಟಾರೆ ಕೀಲಿ ರೂಪದ ಬುಡ, ದುಂಡು ಅಥವಾ ಕಾರ್ಡೇಟ್ ಆಗಿರುತ್ತದೆ, ತುದಿ ಚೂಪಿನಿಂದ ದುಂಡಾಗಿರುತ್ತದೆ,ಅಂಚು ದಂತಿತ ಅಥವಾ ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಫ್ಯಾಸಿಕಲ್. ಪಾಲಿಗ್ಯಾಮಸ್ ಹೂವುಗಳು , ಬಿಳಿ ಅಥವಾ ತಿಳಿ ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿರುತ್ತವೆ.ಅಂಡಾಕಾರದಿಂದ ದುಂಡಗಿರುವ ಹಣ್ಣುಗಳು, ಕಿತ್ತಳೆ ಹಳದಿ, ಕೆಂಪು ಅಥವಾ ನೇರಳೆ ಬಣ್ಣದಲ್ಲಿರುತ್ತವೆ;. ಬೀಜಗಳು ಕೆನೆ ಕಂದು ಬಣ್ಣದಲ್ಲಿರುತ್ತವೆ, 1 -2 ಬೀಜಗಳಿರುತ್ತವೆ.