ಗ್ಲಿರಿಸಿಡಿಯಾ ಸೆಪಿಯಮ್ (ಜಾಕ್.) ಕುಂತ್

ಕನ್ನಡದ ಹೆಸರು : ಗೊಬ್ಬರದ ಮರ
ಸಾಮಾನ್ಯ ಹೆಸರು : ಮೆಕ್ಸಿಕನ್ ಲೈಲ್ಯಾಕ್ ಟ್ರೀ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಗ್ಲಿರಿಸಿಡಿಯಾ ಸೆಪಿಯಮ್ (ಜಾಕ್.) ಕುಂತ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ನವೆಂಬರ್ - ಡಿಸೆಂಬರ್
ಹಣ್ಣಾಗುವ ಅವಧಿ: ಜನವರಿ - ಫೆಬ್ರವರಿ
ಮೂಲ: ಮೆಕ್ಸಿಕೋ, ಮಧ್ಯ ಅಮೇರಿಕಾ

ಉಪಯೋಗಗಳು

sನಾಟಿ ಔಷಧ ಪದ್ಧತಿಯಲ್ಲಿ ಗಿಡದ ಎಲ್ಲಾ ಭಾಗಗಳನ್ನು ಶೀತಗಳು, ಕೆಮ್ಮು, ಜ್ವರ, ತಲೆನೋವು, ಮೂಗೇಟುಗಳು, ಸುಟ್ಟಗಾಯಗಳು, ಸಂಧಿವಾತ, ಹುಣ್ಣುಗಳು ಮತ್ತು ಗಾಯಗಳಂತಹ ದೇಹದ ಬೇರೆಬೇರೆ ತೊಂದರೆಗಳಿಗೆ ಪರಿಹಾರವನ್ನಾಗಿ ಬಲಸಲಾಗುತ್ತದೆ..

ವಿವರಣೆ

. 10-12 ಮೀ ಎತ್ತರವಿರುವ, ಮಧ್ಯಮ ಗಾತ್ರದ, ಡೆಸಿಡುಅಸ್ ಮರ. ತೊಗಟೆ ನಯವಾಗಿರುತ್ತದೆ, ಮತ್ತು ಅದರ ಬಣ್ಣ ಬಿಳಿ ಬೂದು ಬಣ್ಣದಿಂದ ಆಳವಾದ ಕೆಂಪು-ಕಂದು ಬಣ್ಣದ್ದಾಗಿರಬಹುದು. ಇಂಪ್ಯಾರಿಪಿನ್ನೇಟ್ ಆದ ಎಲೆಗಳು, ಸಾಮಾನ್ಯವಾಗಿ ಆಲ್ಟರ್ನೇಟ್ ಆಗಿರುತ್ತವೆ, ಕೆಲವೊಮ್ಮೆ ಸಬ್ ಆಪೋಸಿಟ್ ಆಗಿರುತ್ತವೆ; 5-20 ಚಿಗುರೆಲೆಗಳು, ಆಪೋಸಿಟ್ ಅಪರೂಪವಾಗಿ ಸಬ್-ಆಪೋಸಿಟ್ ಅಥವಾ ಆಲ್ಟರ್ನೇಟ್ ಆಗಿರುತ್ತವೆ, ಒವೇಟ್ ಅಥವಾ ಎಲಿಪ್ಟಿಕ್,ಆಗಿದ್ದು ಮೇಲೆ ರೋಮರಹಿತವಾಗಿರುತ್ತವೆ, ಕೆಳಗೆ ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ಸ್ವಲ್ಪ ತಿರುಗಿರುತ್ತದೆ, ತುದಿ ಚೂಪಾಗಿರುತ್ತದೆ ಅಥವಾ ಕ್ರಮೇಣ ಚೂಪಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ರಸೀಮ್. ಉಭಯಲಿಂಗಿ ಹೂವುಗಳು, ಪ್ರಕಾಶಮಾನವಾದ ಗುಲಾಬಿ ಬಣ್ಣದಿಂದ ಬಿಳಿ ಬಣ್ಣದ ಛಾಯೆಯಿರುವ ನೀಲಕ ಬಣ್ಣದಿಂದ ಕೂಡಿರುತ್ತವೆ, ತಳ ಹಳದಿ ಬಣ್ಣದಲ್ಲಿರುತ್ತವೆ.ಮಾಗಿದಾಗ ಹಳದಿ-ಕಂದು ಬಣ್ಣಕ್ಕೆ ತಿರುಗುವ ಬಿರಿಯದ ಒಂದು ಪಾಡ್. ಗಾಢ ಕಂದು ಬಣ್ಣದ, ಆಯತಾಕಾರದ 4 – 10 ಬೀಜಗಳಿರುತ್ತವೆ.