s
ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಸಿಲ್ವರ್ ಓಕ್ ಟ್ರೀ |
ಕುಟುಂಬದ ಹೆಸರು : | ಪ್ರೋಟಿಯೇಸಿ |
ವೈಜ್ಞಾನಿಕ ಹೆಸರು : | ಗ್ರೆವಿಲ್ಲೆ ರೋಬಸ್ಟಾ A. ಕನ್ನ್ ಎಕ್ಸ್ R. Br |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಮೇ |
ಹಣ್ಣಾಗುವ ಅವಧಿ: | ಮೇ - ಅಕ್ಟೋಬರ್ |
ಮೂಲ: | ಆಸ್ಟ್ರೇಲಿಯಾ |
.ಸಾಂಪ್ರದಾಯಿಕವಾಗಿ ಗಾಯಗಳು ಮತ್ತು ಹುಣ್ಣುಗಳು, ಚರ್ಮ ರೋಗಗಳು, ಅತಿಸಾರ ಮತ್ತು ಭೇದಿ ಮತ್ತು ಬ್ಯಾಕ್ಟೀರಿಯಾನಾಶಕ ಸಿದ್ಧತೆಗಳಲ್ಲಿ ಬುಷ್ ಔಷಧಿಗಯಾಗಿ ಈ ಮರದ ಭಾಗಗಳನ್ನು ಆಸ್ಟ್ರೇಲಿಯಾದ ಮೂಲನಿವಾಸಿಗಳು ಬಳಸುತ್ತಾರೆ. ಹಲವಾರು ಗ್ರೆವಿಲ್ಲೆ ತಳಿಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆ ಇದೆ ಎನ್ನುವ ಅಂಶ ಕೆಲವು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.
.30 ಮೀ ಎತ್ತರದ, ನೆಟ್ಟಗಿರುವ, ನಿತ್ಯಹರಿದ್ವರ್ಣ ಮರ. ಸುಕ್ಕುಗೆರೆಗಳಿರುವ ತೊಗಟೆ ಕಡು ಬೂದು ಬಣ್ಣದಲ್ಲಿರುತ್ತದೆ. ಎಲೆಗಳು ಪಿನೇಟ್,ಆಲ್ಟರ್ನೇಟ್ ಆಗಿರುತ್ತವೆ; ಸೆಸೈಲ್ ಆದ 7-19 ಚಿಗುರೆಲೆಗಳು, ಮೇಲೆ ಆಲಿವ್ ಹಸಿರು, ಕೆಳಗೆ ಬೆಳ್ಳಿ ಬೂದು ರೇಷ್ಮೆಯಂತಹ ಕೂದಲು, ಲ್ಯಾನ್ಸಿಲೇಟ್, ರೋಮರಹಿತ, ಕೀಲಿಆಕಾರದ ಬುಡ, ಚೂಪಾದ ತುದಿ, ಸಂಪೂರ್ಣ ಅಥವಾ ಪಿನಾಟಿಫಿಡ್ ಆಗಿರುತ್ತದೆ, ಅಂಚು ಹಿಂದಕ್ಕೆ ಬಾಗಿರುತ್ತದೆ. ಪುಷ್ಪಮಂಜರಿ ಒಂದು ರೆಸೀಮ್. ರೋಮರಹಿತ, ಹಳದಿ ಕಿತ್ತಳೆ, ಅಥವಾ ಕೆಲವೊಮ್ಮೆ ಕೆಂಪು ಬಣ್ಣದಲ್ಲಿರುವ ದ್ವಿಲಿಂಗಿ ಹೂವುಗಳು. ಹಣ್ಣು , 2 ಬೆಳ್ಳಿ-ಬೂದು ಬಣ್ಣದಿಂದ ಆಲಿವ್ ಹಸಿರು ಬಣ್ಣದಲ್ಲಿರುವ, ಬಿರಿಯುವ, ಒಂದು ಫಾಲಿಕಲ್ (ಕೋಶಕ). ಅಗಲವಾದ ರೆಕ್ಕಗಳನ್ನು ಹೊಂದಿರುವ, ತೆಳ್ಳಗೆ, ಅಂಡಾಕಾರದಲ್ಲಿರುವ 2 ಬೀಜಗಳಿರುತ್ತವೆ