ಗ್ವಾಜುಮಾ ಉಲ್ಮಿಫೋಲಿಯಾ ಲ್ಯಾಮ್

ಕನ್ನಡದ ಹೆಸರು : ರುದ್ರಾಕ್ಷಿ
ಸಾಮಾನ್ಯ ಹೆಸರು : ವೆಸ್ಟ್ ಇಂಡಿಯನ್ ಎಲ್ಮ್
ಕುಟುಂಬದ ಹೆಸರು : ಮಾಲ್ವೇಸೀ
ವೈಜ್ಞಾನಿಕ ಹೆಸರು : ಗ್ವಾಜುಮಾ ಉಲ್ಮಿಫೋಲಿಯಾ ಲ್ಯಾಮ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಮಧ್ಯ ಅಮೇರಿಕಾ, ಜಾವಾ

ಉಪಯೋಗಗಳು

. ಅತಿಸಾರ, ರಕ್ತಸ್ರಾವ, ಜ್ವರ, ಕೆಮ್ಮು, ಬ್ರಾಂಕೈಟಿಸ್, ಆಸ್ತಮಾ, ಜಠರಗರುಳಿನ ನೋವು ಮತ್ತು ಅಧಿಕ ರಕ್ತದೊತ್ತಡದ ಚಿಕಿತ್ಸೆಯಲ್ಲಿ ಮತ್ತು ಗರ್ಭಾಶಯದ ಕುಗ್ಗುವಿಕೆಗೆ ಉತ್ತೇಜಕವಾಗಿ ಇದನ್ನು ಬಳಸಲಾಗುತ್ತದೆ. ಕೆಲವು ದೇಶಗಳಲ್ಲಿ ಒಣಗಿದ ಎಲೆಗಳನ್ನು ಕುದಿಸಿ ಚಹಾ ಮಾಡಲಾಗುತ್ತದೆ ಮತ್ತು ಅದನ್ನು ಮೂತ್ರಪಿಂಡದ ಮತ್ತು ಜಠರಗರುಳಿನ ಕಾಯಿಲೆಗಳು, ಜ್ವರ, ಭೇದಿ ಮತ್ತು ಮಧುಮೇಹದ ಚಿಕಿತ್ಸೆಗೆ ಬಳಸಲಾಗುತ್ತದೆ ಮತ್ತು ಬಾಹ್ಯವಾಗಿ ಗಾಯಗಳು, ಚರ್ಮದ ದದ್ದುಗಳು ಮತ್ತು ಬಕ್ಕತಲೆಯ ಸಮಸ್ಯೆಗೂ ಸಹ ಬಳಸಲಾಗುತ್ತದೆ.

ವಿವರಣೆ

25 ಮೀ ಎತ್ತರದವರೆಗೆ ಇರುವ, ಡೆಸಿಡುಅಸ್ ಮರ.ಎಳೆಯ ಕೊಂಬೆಗಳು ಪ್ಯೂಬರುಲೆಂಟ್ ಆಗಿರುತ್ತವೆ. ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿರುತ್ತವೆ,ಒವೇಟ್ ನಿಂದ ಲ್ಯಾನ್ಸಿಲೇಟ್ ಆಗಿರುತ್ತವೆ, ಪೊರೆಯಿಂದ ಚರ್ಮದಂತಿರುತ್ತವೆ, ಮೇಲೆ ತರಕಲಾಗಿದ್ದು, ಕೆಳಗೆ ಮಕಮಲ್ಲಿನಂತಿರುತ್ತದೆ, ಓರೆಯಾದ ಬುಡ, ಚೂಪಾದ ತುದಿ, ಗರಗಸದಿಂದ ದಂತಿತವಾಗಿರುತ್ತದೆ ಅಂಚು. ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿ ಅಥವಾ ತುದಿಯಲ್ಲಿರುವ, ಥೈರ್ಸಿಫಾರ್ಮ್ ಸಂಯುಕ್ತ ಪುಷ್ಪ. ಹೂವುಗಳು ಸಣ್ಣದಾಗಿದ್ದು, ದ್ವಿಲಿಂಗಿಗಳಾಗಿತ್ತವೆ, ಕಂದು-ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು ಟ್ಯೂಬರ್ಕ್ಯುಲೇಟ್ ಆದ , ಗೋಳಾಕಾರ ಅಥವಾ ಒಬ್ಲಾಂಗ್ –ಎಲಿಪ್ಸಾಯ್ಡ್ ಆಕಾರದಲ್ಲಿರುವ ಒಂದು ಕ್ಯಾಪ್ಸುಲ್.