ಹೈಡ್ರೊಆನ್ತಸ್ ಕ್ರೈಸೊಟ್ರಿಚಸ್( ಮಾರ್ಟ್ ಎಕ್ಸ್ ಡಿಸಿ.) ಮಟ್ಟೊಸ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಗೋಲ್ಡನ್ ಹೇರ್ಡ್ ಟ್ರಂಪೆಟ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಹೈಡ್ರೊಆನ್ತಸ್ ಕ್ರೈಸೊಟ್ರಿಚಸ್( ಮಾರ್ಟ್ ಎಕ್ಸ್ ಡಿಸಿ.) ಮಟ್ಟೊಸ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಅರೆ-ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಏಪ್ರಿಲ್ - ಮೇ
ಹಣ್ಣಾಗುವ ಅವಧಿ: ಏಪ್ರಿಲ್
ಮೂಲ: ಬ್ರೆಜಿಲ್

ಉಪಯೋಗಗಳು

ಇದರ ಹೂವುಗಳು, ಕಾಂಡ ಮತ್ತು ತೊಗಟೆಯನ್ನು ಹೃದಯದ ರಕ್ತನಾಳದ ಮತ್ತು ಇಮ್ಯೂನ್ ಸಿಸ್ಟಂ ಗೆ ಸಂಬಧಿಸಿದ ರೋಗಗಳ ಚಿಕಿತ್ಸೆಯಲ್ಲಿ ಔಷಧದ ರೀತಿಯಲ್ಲಿ ಬಳಸಲಾಗುತ್ತದೆ.

ವಿವರಣೆ

. ದುಂಡಗಿರುವ ಮೇಲ್ಭಾಗವಿರುವ, 2-10 ಮೀ ಎತ್ತರದ, ಸಣ್ಣ ಡೆಸಿಡುಅಸ್ ಮರ. ಚಿಕ್ಕದಿರುವಾಗ ನಕ್ಷತ್ರದಂತಹ ಶಲ್ಕಗಳನ್ನು ಹೊಂದಿರುವ ಎಳೆಯ ಕೊಂಬೆಗಳು ಸಬ್‌ಟೆಟ್ರಾಗೋನಸ್‌ನಿಂದ ಸಬ್‌ಟೆರೆಟ್‌ ಆಗಿರುತ್ತವೆ,ರೋಮರಹಿತವಾಗಿರುತ್ತವೆ. ಎಲೆಗಳು ಹಸ್ತಾಕಾರದಲ್ಲಿದ್ದು, 3-5 ಎಲೆಗಳಿರುತ್ತವೆ; ನಕ್ಷತ್ರಾಕಾರದ ಶಲ್ಕಗಳನ್ನು(ಟ್ರೈಕೋಮ್‌ಗಳನ್ನು) ಹೊಂದಿರುವ ತೊಟ್ಟು; ಚಿಗುರೆಲೆಗಳು ಒಬ್ಲಾಂಗ್ – ಒವೇಟ್ ,ಒಬ್ಲಾಂಗ್ –ಎಲಿಪ್ಟಿಕಲ್, ಕಾಗದದಂತಿರುತ್ತವೆ, ಲೆಪಿಡೋಟ್‌ಗಳು ಇರುತ್ತವೆ, ತರಕಲಾಗಿದ್ದು, ನಕ್ಷತ್ರಾಕಾರದ ಶಲ್ಕಗಳಿರುತ್ತವೆ, ಒಬ್ಟ್ಯೂಸ್ ನಿಂದ ಟ್ರಂಕೇಟ್ ಆದ ಬುಡ, ತುದಿ ಚೂಪಾಗಿರುತ್ತದೆ ಅಥವಾ ದುಂಡಾಗಿರುತ್ತದೆ ಥಟ್ಟನೆ ಕಸ್ಪಿಡೇಟ್ –ಉಪಕುಮಿನೆಡ್ ಆಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ, ಅಪರೂಪವಾಗಿ ತುದಿಯಲ್ಲಿ ದಂತುರವಾಗಿರುತ್ತದೆ. ಪುಷ್ಪಮಂಜರಿ ಒಂದು ಟರ್ಮಿನಲ್ ಪುಷ್ಪ ಗುಚ್ಛ(ಗ್ಲೋಮೆರುಲ್). ಹೂವುಗಳು ಕೊಳವೆಯಾಕಾರದಲ್ಲಿದ್ದು ದ್ವಿಲಿಂಗಿಯಾಗಿರುತ್ತವೆ, , ಚಿನ್ನದ ಹಳದಿ ಮತ್ತು ಗಂಟಲಿನಲ್ಲಿ ಕೆಂಪು ಬಣ್ಣ ಹೊಂದಿರುತ್ತವೆ, ನಕ್ಷತ್ರಾಕಾರದ ಶಲ್ಕಗಳಿರುತ್ತವೆ. ಹಣ್ಣು ಕೆಂಪು ಬಣ್ಣದ ಲೀನಿಯರ್ – ಸಿಲಿಂಡ್ರಿಕಲ್, ಗಡ್ಡವಿರುವ ಟ್ರೈಕೋಮ್‌ಗಳಿರುವ, ರೋಮದಿಂದ ಆವೃತವಾಗಿರುವಂತಹ ಒಂದು ಕ್ಯಾಪ್ಸುಲ್. ಗಾಜಿನ ಪೊರೆಯಂತಹ ರೆಕ್ಕೆಗಳನ್ನು ಹೊಂದಿರುವ ಬೀಜಗಳು.