ಹ್ಯಾಂಡ್ರೊಆಂಥಸ್ ಇಂಪೆಟಿಜಿನೋಸಸ್ (ಮಾರ್ಟ್. ಎಕ್ಸ್ ಡಿಸಿ.) ಮ್ಯಾಟೊಸ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಪಿಂಕ್ ಟ್ರಂಪೆಟ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಹ್ಯಾಂಡ್ರೊಆಂಥಸ್ ಇಂಪೆಟಿಜಿನೋಸಸ್ (ಮಾರ್ಟ್. ಎಕ್ಸ್ ಡಿಸಿ.) ಮ್ಯಾಟೊಸ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಫೆಬ್ರವರಿ - ಮಾರ್ಚ್
ಹಣ್ಣಾಗುವ ಅವಧಿ: -
ಮೂಲ: ದಕ್ಷಿಣ ಮತ್ತು ಮಧ್ಯ ಅಮೇರಿಕಾ

ಉಪಯೋಗಗಳು

.ಉರಿಯೂತ, ಕ್ಯಾನ್ಸರ್, ಸಿಫಿಲಿಸ್, ಮಲೇರಿಯಾ, ಜ್ವರ, ಟ್ರಿಪನೋಸೋಮಿಯಾಸಿಸ್, ಶಿಲೀಂಧ್ರಗಳ ಸೋಂಕುಗಳು, ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಹೊಟ್ಟೆಯ ಹುಣ್ಣುಗಳಿಗೆ ಇದನ್ನು ಪರಿಹಾರವಾಗಿ ಬಳಸಲಾಗುತ್ತದೆ.

ವಿವರಣೆ

. 25 ಮೀ ಎತ್ತರದವರೆಗೆ ಇರುವ ದೊಡ್ಡ ಡೆಸಿಡುಅಸ್ ಮರ. ತೊಗಟೆ ನಯವಾಗಿದ್ದು, ಬೂದು ಬಣ್ಣದಲ್ಲಿರುತ್ತದೆ, ಮರ ಹಸಿರು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ; ಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. ಹಸ್ತಾಕಾರದ ಎಲೆಗಳು, 5-7 ಎಲೆಗಳಿದ್ದು, ಆಪೊಸಿಟ್ ಆಗಿರುತ್ತವೆ; ಚಿಗುರೆಲೆಗಳು ಒವೇಟ್ ನಿಂದ ಎಲಿಪ್ಟಿಕಲ್ , ಕಾಗದಂತಿದ್ದು ಪೊರೆಯಂತಾಗಿರುತ್ತವೆ , ಲೆಪಿಡೋಟ್, ಪ್ಯೂಬೆಸೆಂಟ್ ಆಗಿರುತ್ತವೆ, ಬುಡ ಕ್ಯೂನೇಟ್‌ನಿಂದ ದುಂಡಾಗಿರುತ್ತದೆ, ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣ ಅಥವಾ ಗರಗಸದಂತಿರುತ್ತದೆ. ಪುಷ್ಪಮಂಜರಿ ಒಂದು ಟರ್ಮಿನಲ್ ಪ್ಯಾನಿಕ್ಲ್. ಹೂವು, ಕೊಳವೆಯಾಕಾರದಲ್ಲಿದ್ದು, ದೊಡ್ಡದಾಗಿರುತ್ತದೆ, ಗುಲಾಬಿ-ನೇರಳೆ ಬಣ್ಣದಿಂದ ಆಳವಾದ ಕೆನ್ನೇರಳೆ ಬಣ್ಣದಲ್ಲಿದ್ದು ಮೃದುತುಪ್ಪಳವನ್ನು ಹೊಂದಿರುತ್ತದೆ. ಹಣ್ಣು 12-56 ಸೆಂ.ಮೀ.ಉದ್ದನೆಯ –ಕೊಳವೆಯಾಕಾರದ, ತುದಿಗಳೆರಡೂ ಚೂಪಾಗಿರುವ, ರೋಮರಹಿತವಾದ ಒಂದು ಕ್ಯಾಪ್ಸುಲ್.ಬೀಜಗಳು ಗಾಜಿನಂತಹ ರೆಕ್ಕೆಗಳನ್ನು ಹೊಂದಿರುತ್ತವೆ.