ಹೊಲೊಪ್ಟೆಲಿಯಾ ಇಂಟೆಗ್ರಿಫೋಲಿಯಾ (ರಾಕ್ಸ್‌ಬಿ.) ಪ್ಲಾಂಚ್

ಕನ್ನಡದ ಹೆಸರು : ತಪಸಿ ಮರ, ರಾಹುಬೀಜ ನವುಲೆ
ಸಾಮಾನ್ಯ ಹೆಸರು : ಇಂಡಿಯನ್ ಎಲ್ಮ್ ಟ್ರೀ, ಜಂಗಲ್ ಕಾರ್ಕ್ ಟ್ರೀ
ಕುಟುಂಬದ ಹೆಸರು : ಉಲ್ಮೇಸಿಯೇ
ವೈಜ್ಞಾನಿಕ ಹೆಸರು : ಹೊಲೊಪ್ಟೆಲಿಯಾ ಇಂಟೆಗ್ರಿಫೋಲಿಯಾ (ರಾಕ್ಸ್‌ಬಿ.) ಪ್ಲಾಂಚ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜನವರಿ - ಫೆಬ್ರವರಿ
ಹಣ್ಣಾಗುವ ಅವಧಿ: ಏಪ್ರಿಲ್ - ಮೇ
ಮೂಲ: ಭಾರತದ ಉಪಖಂಡ, ಮಯನ್ಮಾರ್, ಇಂಡೋ-ಚೀನಾ

ಉಪಯೋಗಗಳು

.ತೊಗಟೆ ಮತ್ತು ಎಲೆಗಳನ್ನು ಎಡಿಮಾ, ಮಧುಮೇಹ, ಕುಷ್ಠರೋಗ ಮತ್ತು ಇತರ ಚರ್ಮ ರೋಗಗಳು, ಕರುಳಿನ ಅಸ್ವಸ್ಥತೆಗಳು, ಪೈಲ್ಸ್ ಮತ್ತು ಸ್ಪ್ರೂ ಚಿಕಿತ್ಸೆಗಾಗಿ ಬಳಸಲಾಗುತ್ತದೆ.ಬೀಜ ಮತ್ತು ಕಾಂಡದ ತೊಗಟೆಯಿಂದ ತಯಾರಿಸಿದ ಪೇಸ್ಟ್ ಅನ್ನು ಹುಳುಕಡ್ಡಿಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ವಿವರಣೆ

. ದೊಡ್ಡ ಪತನಶೀಲ ಮರ, ಸುಮಾರು 20-25 ಮೀ ಎತ್ತರವಿರುವ, ದೊಡ್ಡ ಡೆಸಿಡುಅಸ್ ಮರ. ತೊಗಟೆ ಬಿಳಿ ಬೂದುಬಣ್ಣದಿಂದ ಕಂದು ಬಣ್ಣದಲ್ಲಿರುತ್ತದೆ, ತೊಗಟೆಗೆ ಗುದ್ದಿದಾಗ ಮತ್ತು ಎಲೆಗಳನ್ನು ಪುಡಿಮಾಡಿದಾಗ ಅವುಗಳಿಂದ ಒಂದು ಬಲವಾದ ವಾಸನೆ ಬರುತ್ತದೆ,ಕಿರುಕೊಂಬೆಗಳು ಪ್ಯೂಬೆಸೆಂಟ್ ಆಗಿರುತ್ತವೆ. ಎಲೆಗಳು ಸರಳ,ಆಲ್ಟರ್ನೇಟ್, ಎಲಿಪ್ಟಿಕ್ –ಓವೇಟ್ , ಓವೇಟ್ – ಒಬ್ಲಾಂಗ್ ಅಥವಾ ಓವೇಟ್ ಆಗಿರುತ್ತವೆ, ಚರ್ಮದಂತಿದ್ದು, ಮೇಲೆ ರೋಮರಹಿತವಾಗಿರುತ್ತವೆ, ಕೆಳಗೆ ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ದುಂಡಾಗಿರುತ್ತದೆ ಅಥವಾ ಸಬ್ ಕಾರ್ಡೇಟ್ ಆಗಿರುತ್ತದೆ, ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ , ಎಳೆಯದಾಗಿದ್ದಾಗ ಸ್ಪಷ್ಟವಾಗಿ ದಂತುರವಾಗಿರುತ್ತದೆ. ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನ ಗುಚ್ಛ .ಪಾಲಿಗ್ಯಾಮಸ್ ಆದ ಹೂವುಗಳು, ಹಸಿರು-ನೇರಳೆ ಬಣ್ಣದಲ್ಲಿದ್ದು,ಪ್ಯೂಬೆಸೆಂಟ್ ಆಗಿರುತ್ತವೆ; ಹೆಣ್ಣು ಹೂವುಗಳು ಉದ್ದವಾದ ತೊಟ್ಟುಗಳನ್ನು ಹೊಂದಿರುತ್ತವೆ. ಹಣ್ಣು , 3 ಸೆಂ ಅಗಲದ, ದುಂಡನೆಯ ಒಂದು ಸಮಾರ (ರೆಕ್ಕೆಬೀಜ), ನಡುರೇಖೆಗಳಿರುವ ರೆಕ್ಕೆಗಳಿದ್ದು, ರೋಮರಹಿತವಾಗಿರುತ್ತವೆ ಮತ್ತು ,ಒಂದು ಚಪ್ಪಟೆಯಾದ ಬೀಜವಿರುತ್ತದೆ..