ಜಕರಂಡ ಮಿಮೋಸಿಫೋಲಿಯಾ ಡಿ. ಡಾನ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಜಕರಂಡ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಜಕರಂಡ ಮಿಮೋಸಿಫೋಲಿಯ
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಬೇಧ್ಯ, ವಲ್ನರಬಲ್
ಹೂಬಿಡುವ ಅವಧಿ: ಮಾರ್ಚ್ - ಮೇ
ಹಣ್ಣಾಗುವ ಅವಧಿ: ಅಕ್ಟೋಬರ್ - ನವೆಂಬರ್
ಮೂಲ: ದಕ್ಷಿಣ ಅಮೇರಿಕಾ

ಉಪಯೋಗಗಳು

.ತೊಗಟೆ ಮತ್ತು ಬೇರುಗಳನ್ನು ಸಿಫಿಲಿಸ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಮರವು ಬಯಲಲ್ಲಿ ಹಿತವಾದ ನೆರಳನ್ನು ನೀಡುತ್ತದೆ ಮತ್ತು ಇದನ್ನು ಪರಿಣಾಮಕಾರಿಯಾಗಿ ಪರದೆಯಂತೆ ಅಥವಾ ಗಾಳಿಯನ್ನು ತಡೆಯಲು ಬಳಸಬಹುದು. ಇದನ್ನು ಅಲಂಕಾರಿಕ ಸಸ್ಯವನ್ನಾಗಿಯೂ ಬಳಸಲಾಗುತ್ತದೆ.

ವಿವರಣೆ

20 ಮೀ ಎತ್ತರವಿರುವ, ಡೆಸಿಡುಅಸ್ ಮರ.ತೊಗಟೆಯು ತೆಳ್ಳಗಿದ್ದು, ಬೂದು-ಕಂದು ಬಣ್ಣದಲ್ಲಿರುತ್ತದೆ, ಮರ ಚಿಕ್ಕದಾಗಿದ್ದಾಗ ನಯವಾಗಿರುತ್ತದೆ ಆದರೆ ಮುಂದೆ ಬಲಿತಾಗ ಸಪೂರಾದ ಚಕ್ಕೆಗಳಿರುತ್ತವೆ. ಎಲೆಗಳು ಬೈಪಿನ್ನೇಟ್, ಆಲ್ಟರ್ನೇಟ್ ಆಗಿರುತ್ತವೆ, 12-31 ಪಿನ್ನಗಳಿರುತ್ತವೆ, 13-41 ಸೆಸೈಲ್ ಆದ ಚಿಗುರೆಲೆಗಳು; ಸ್ವಲ್ಪ ಅಂಡಾಕಾರದಲ್ಲಿರುವ ಚಿಗುರೆಲೆಗಳು,ಕಾಗದದಂತಿದ್ದು, ರೋಮರಹಿತ, ಅಥವಾ ಮಧ್ಯನಾಳ ಮತ್ತು ಅಂಚಿನ ಉದ್ದಕ್ಕೂ ಸ್ವಲ್ಪ ಪ್ಯುಬೆರುಲಸ್ ಆಗಿರುತ್ತವೆ, ಕೀಲಿಆಕಾರದ ಬುಡ, ತುದಿ ಚೂಪಾಗಿರುತ್ತದೆ, ಅಂಚು ಸ್ವಲ್ಪ ತಿರುಗಿರುತ್ತದೆ. ದ್ವಿಲಿಂಗಿಯಾದ ಹೂವುಗಳು, ನೇರಳೆ-ನೀಲಿ ಅಥವಾ ನೀಲಕ ಬಣ್ಣದಲ್ಲಿರುತ್ತವೆ, ಹೊರಭಾಗದಲ್ಲಿ ಪ್ಯೂಬೆಸೆಂಟ್ ಆಗಿರುತ್ತವೆ. ಹಣ್ಣು ಒಂದು ಗುಂಡನೆಯ,ವುಡಿಯಾದ,ಕುಗ್ಗಿದಂತಿರುವ, ಕೆಂಪು-ಕಂದು ಬಣ್ಣದ, ಕ್ಯಾಪ್ಸುಲ್. ಬೀಜಗಳು ತೆಳ್ಳಗಿರುತ್ತವೆ, ಕಂದು ಬಣ್ಣದ ಗೆರೆಗಳಿರುವ ರೆಕ್ಕೆಗಳನ್ನು ಹೊಂದಿರುತ್ತವೆ.