ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಆಫ್ರಿಕನ್ ಮಹಾಗನಿ, ಬೆನಿನ್ ಮಹಾಗನಿ |
ಕುಟುಂಬದ ಹೆಸರು : | ಮೆಲಿಯೇಸಿ |
ವೈಜ್ಞಾನಿಕ ಹೆಸರು : | ಖಯಾ ಗ್ರಾಂಡಿಫೋಲಿಯೊಲಾ ಸಿ. ಡಿಸಿ. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ಬೇಧ್ಯ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ಆಫ್ರಿಕಾ |
.ಕಹಿ ರುಚಿಯ ತೊಗಟೆಯನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಮಲೇರಿಯಾದಿಂದ ಉಂಟಾಗುವ ಜ್ವರದ ಚಿಕಿತ್ಸೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ, ಜೊತೆಗೆ ಜಠರದ ಹುಣ್ಣುಗಳು ಮತ್ತು ಕರುಳಿನ ಪ್ಯಾರಸೈಟ್ ಗಳಿಂದ ಉಂಟಾಗುವ ಅತಿಸಾರ ಸೇರಿದಂತೆ ಹೊಟ್ಟೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಕಷಾಯವನ್ನು ಸೇವಿಸಲಾಗುತ್ತದೆ.
. ಇದು 30 ಮೀ ವರೆಗೆ ಬೆಳೆಯುವಂತಹ ಸೆಮಿ- ಡೆಸಿಡುಅಸ್ ಮರವಾಗಿದೆ, ತೊಗಟೆ ಕಡು ಕಂದು ಬಣ್ಣದಿಂದ ಬೂದು ಬಣ್ಣದಲ್ಲಿರುತ್ತದೆ. ಬಟ್ರೆಸ್ಸ್ಡ್ ಆಗಿರುತ್ತದೆ. ಎಲೆಗಳು ಪ್ಯಾರಿಪಿನ್ನೇಟ್, 3-5 ಜೋಡಿ ಚಿಗುರೆಲೆಗಳು; ಚಿಗುರೆಲೆಗಳು ಆಪೊಸಿಟ್ ಅಥವಾ ಸಬ್ –ಆಪೊಸಿಟ್ , ಒಟ್ಟಾರೆಯಾಗಿ ಎಲಿಪ್ಟಿಕಲ್ , ಓವಲ್–ಎಲಿಪ್ಟಿಕಲ್,ಆಗಿದ್ದು ಕಾಗದದಂತಿರುತ್ತವೆ, ಬುಡ ಚೂಪು ಅಥವಾ ಸ್ವಲ್ಪ ದುಂಡಾಗಿರುತ್ತದೆ, ಥಟ್ಟನೆ ಚೂಪಾಗುವ ತುದಿ ಇರುತ್ತದೆ, ಅಂಚು ಅಲೆಯಂತಿರುತ್ತದೆ. ಎಳೆಯ ಎಲೆಗಳು ನಸು ಕೆಂಪು ಬಣ್ಣದಲ್ಲಿರುತ್ತವೆ. ಪುಷ್ಪ ಮಂಜರಿ ಒಂದು ಪ್ಯಾನಿಕಲ್. ದ್ವಿಲಿಂಗಿ ಹೂವುಗಳು , ಹಳದಿ-ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು ದುಂಡನೆಯ, ವುಡಿಯಾದ, 4-5 ಕವಾಟಗಳನ್ನು ಒಳಗೊಂಡಂತಹ ಕ್ಯಾಪ್ಸುಲ್. ರೆಕ್ಕೆಗಳಿರುವ, ಕೆಂಪು-ಕಂದು ಬಣ್ಣದ, .ಹಲವಾರು ಬೀಜಗಳಿರುತ್ತವೆ.