ಕನ್ನಡದ ಹೆಸರು : | ಆನೆತೋರಡು ಕಾಯಿ, ಮರಸೌತೆ |
ಸಾಮಾನ್ಯ ಹೆಸರು : | ಸಾಸೇಜ್ ಟ್ರೀ |
ಕುಟುಂಬದ ಹೆಸರು : | eಬಿಗ್ನೋನಿಯೇಸಿ |
ವೈಜ್ಞಾನಿಕ ಹೆಸರು : | ಕಿಗೆಲಿಯಾ ಪಿನ್ನಾಟಾ (ಲ್ಯಾಮ್.) ಬೆಂತ್ |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಅರೆ-ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಆಗಸ್ಟ್ - ಅಕ್ಟೋಬರ್ |
ಹಣ್ಣಾಗುವ ಅವಧಿ: | ಡಿಸೆಂಬರ್ - ಜೂನ್ |
ಮೂಲ: | ಟ್ರಾಪಿಕಲ್ ಆಫ್ರಿಕಾ |
sಇದನ್ನು ಹಲವಾರು ಸ್ಕಿನ್ ಕೇರ್ ಪ್ರಾಡಕ್ಟ್ ಗಳಲ್ಲಿ ಬಳಸಲಾಗುತ್ತದೆ. ಮರವನ್ನು ಮಕೋರೋಸ್, ನೊಗಗಳು ಮತ್ತು ಹುಟ್ಟುಗೋಲುಗಳಿಗೆ ಬಳಸಲಾಗುತ್ತದೆ. ತೊಗಟೆ ಮತ್ತು ಹಣ್ಣುಗಳನ್ನು ಸೇರಿಸಿ ತಯಾರಿಸಿದ ಲೇಹವನ್ನು ಹುಣ್ಣುಗಳನ್ನು ಗುಣಪಡಿಸಲು ಮತ್ತು ರುಚಿಯನ್ನು ಪುನಃ ಪಡೆಯಲು ಬಳಸಲಾಗುತ್ತದೆ. ಪುಡಿಯಿಂದ ತಯಾರಿಸಿದ ಎಣ್ಣೆಭರಿತವಾದ ಮುಲಾಮುವನ್ನು ಸಂಧಿವಾತ ಇರುವ ಭಾಗಗಳ ಮೇಲೆ ಹಾಗೂ ಮಾರಣಾಂತಿಕ ಗೆಡ್ಡೆಗಳ ಮೇಲೆ ಉಜ್ಜಲು ಬಳಸಲಾಗುತ್ತದೆ. ಕೆಲವೊಮ್ಮೆ ಎಲೆಗಳನ್ನು ಸಂಧಿವಾತ, ಮಲೇರಿಯಾ, ಬಂಜೆತನ, ಅಪಸ್ಮಾರ, ತಲೆನೋವು, ಭೇದಿ, ಹೊಟ್ಟೆ ಮತ್ತು ಮೂತ್ರಪಿಂಡದ ದೂರುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
20 ಮೀ ಎತ್ತರದವರೆಗೆ ಇರುವ ಮರ, ಕೊಂಬೆಗಳು ಹರಡಿದಂತಿರುತ್ತವೆ. ತೊಗಟೆ ಬೂದು ಬಣ್ಣ, ಕೆಲವೊಮ್ಮೊ ಕಂದು, ಬಣ್ಣದಲ್ಲಿರುತ್ತದೆ. ಮೊದಲಿಗೆ ನುಣುಪಾಗಿದ್ದು, ಮರ ಹಳೆಯದಾದಂತೆ ತೊಗಟೆ ಸುಲಿಯುತ್ತದೆ. ಎಲೆಗಳು ಇಂಪ್ಯಾರಿಪಿನ್ನೇಟ್,ಆಪೊಸಿಟ್ ಅಥವಾ ಸಬ್-ಆಪೊಸಿಟ್ ಆಗಿರುತ್ತವೆ, 7-9 ಚಿಗುರೆಲೆಗಳು ಇರುತ್ತವೆ; ಚಿಗುರೆಲೆಗಳು ಎಲಿಪ್ಟಿಕ್ ನಿಂದ ಎಲಿಪ್ಟಿಕ್ – ಒಬೊವೇಟ್ ಆಗಿದ್ದು , ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ದುಂಡಾಗಿರುತ್ತದೆ ಅಥವಾ ಅಕ್ಯೂಟ್ ನಿಂದ ಕ್ಯುನಿಯೇಟ್ ಆಗಿರುತ್ತದೆ, ತುದಿ ದುಂಡಗೆ, ಮೊಂಡು ಅಥವಾ ಅಕ್ಯೂಟ್ ನಿಂದ ಅಕ್ಯುಮಿನೇಟ್ ಆಗಿರುತ್ತದೆ, ಸಂಪೂರ್ಣ ಅಥವಾ ದಂತುರವಾದ ಅಂಚಿರುತ್ತದೆ. ಪುಷ್ಪಮಂಜರಿ ಒಂದು ಟರ್ಮಿನಲ್ ಪ್ಯಾನಿಕಲ್. ದ್ವಿಲಿಂಗಿ ಹೂವುಗಳು, ಗಂಟೆಯ ಆಕಾರದಲ್ಲಿರುತ್ತವೆ, ಹೊರಗೆ ಹಳದಿ , ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿರುತ್ತವೆ ಮತ್ತು ಒಳಗೆ ಕಡು ಕೆಂಪು ಬಣ್ಣದಿಂದ ಕಪ್ಪು ಬಣ್ಣ ಪಡೆಯುತ್ತವೆ. ಹಣ್ಣು 1 ಮೀ ಉದ್ದದ, ಜೋತಾಡುವ, ಸಾಸೇಜ್ ಆಕಾರದ, ವುಡಿಯಾದ, ಬಿರಿಯದ ಬೆರ್ರಿ. ತಿರುಳಿನಲ್ಲಿ ಹಲವಾರು ಬೀಜಗಳು ಹುದುಗಿರುತ್ತವೆ.